ETV Bharat / state

ಕೋವಿಡ್​ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಎಡವಿದೆ: ಜಂಟಿ ಕಾರ್ಮಿಕ ಸಂಘಟನೆಯಿಂದ ಆರೋಪ - protest in vijayapura

ಲಾಕ್​ಡೌನ್​​​ ಪರಿಣಾಮ ಅನೇಕ ಕಾರ್ಮಿಕರು ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದು ಪರದಾಡುತ್ತಿದ್ದಾರೆ. ಅವರಿಗೆ ಸರ್ಕಾರ ಮಾಸಿಕವಾಗಿ 7,500 ರೂ.‌ ನಗದು ನೀಡಬೇಕೆಂದು ವಿಜಯಪುರ ಜಂಟಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.

labour organisation protest
ಜಂಟಿ ಕಾರ್ಮಿಕ ಸಂಘಟನೆ
author img

By

Published : Jul 3, 2020, 5:07 PM IST

ವಿಜಯಪುರ: ಕೇಂದ್ರ ಸರ್ಕಾರ ಕೊರೊನಾ‌ ವೈರಸ್ ನಿಯಂತ್ರಣದಲ್ಲಿ ಎಡವಿದೆ ಎಂದು ಆರೋಪಿಸಿ ಜಂಟಿ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಂಟಿ ಕಾರ್ಮಿಕ ಸಂಘಟನೆ

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಳೆದ ಒಂದು ತಿಂಗಳಿಂದ‌ ದೇಶದಲ್ಲಿ ಕೊರೊನಾ‌ ರಣಕೇಕೆ ಹಾಕುತ್ತಿದ್ದು ಜನರು ತಮ್ಮ ದುಡಿಮೆ ಕಳೆದುಕೊಳ್ಳುವಂತಾಗಿದೆ. ಅಲ್ಲದೆ ಲಾಕ್​ಡೌನ್​​​ ಪರಿಣಾಮ ಅನೇಕ ಕಾರ್ಮಿಕರು ಕಂಪನಿಗಳಲ್ಲಿ ಉದ್ಯೋಗ ಕಳೆದುಕೊಂಡ ಪರಿಣಾಮ ಇಂದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರ ಮಾಸಿಕವಾಗಿ 7,500 ರೂ.‌ ನೆರವು ನೀಡಬೇಕೆಂದು ಒತ್ತಾಯಿಸಿದರು.

ಅಲ್ಲದೇ ಕೊರೊನಾ ಫ್ರಂಟ್ ಲೈನ್​ನಲ್ಲಿರುವ ವಾರಿಯರ್ಸ್‌ ಅನ್ನ ಕೇಂದ್ರ ಸರ್ಕಾರ ಖಾಯಂಗೊಳಿಸಬೇಕು ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳಿಗೆ ವಿಸ್ತರಿಸುವಂತೆ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.