ETV Bharat / state

ಆರ್​ಎಸ್​ಎಸ್​ ವಿರುದ್ಧ ಧೈರ್ಯ ತೋರಿಸುವ ಶಕ್ತಿ ಕಾಂಗ್ರೆಸ್​ಗೆ ಇಲ್ಲ: ಹೆಚ್​ಡಿಕೆ - ಆರ್​ಎಸ್​ಎಸ್ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ

ಕಾಂಗ್ರೆಸ್ ತಮ್ಮನ್ನು ಬಿಜೆಪಿಯ 'ಬಿ' ಟೀಮ್ ಎನ್ನುತ್ತದೆ. ಇನ್ನೊಂದು ಕಡೆ ಮುಸ್ಲಿಂ ಓಲೈಕೆಗೆ ಆರ್​ಎಸ್​ಎಸ್​ ಅಟ್ಯಾಕ್ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದನ್ನು ನಂಬಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

h-d-kumaraswamy
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
author img

By

Published : Oct 7, 2021, 9:03 PM IST

ವಿಜಯಪುರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರ್​ಎಸ್​ಎಸ್​ ಕಪಿಮುಷ್ಠಿಯಲ್ಲಿವೆ. ಈ ಬಗ್ಗೆ ನಾನು ಘಂಟಾಘೋಷವಾಗಿ ಮಾತನಾಡುತ್ತಿದ್ದೇನೆ. ಆರ್​ಎಸ್​ಎಸ್​ ಬಗ್ಗೆ ಈಗ ಚರ್ಚೆ ಹುಟ್ಟು ಹಾಕಿದ್ದೇನೆ. ಆದರೆ, ಕಾಂಗ್ರೆಸ್ ಮುಖಂಡರಿಗೆ ಈ ವಿಷಯವಾಗಿ ಮಾತನಾಡುವ ಧೈರ್ಯವಿದೆಯಾ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಸ್ಲಿಂರ ಓಲೈಕೆಗೆ ಹೆಚ್​ಡಿಕೆ ಆರ್​ಎಸ್​ಎಸ್​ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಏಕೆ ಧ್ವನಿ ಎತ್ತುತ್ತಿಲ್ಲ ಎಂದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಕಾಂಗ್ರೆಸ್ ತಮ್ಮನ್ನು ಬಿಜೆಪಿ 'ಬಿ' ಟೀಮ್ ಎನ್ನುತ್ತದೆ. ಇನ್ನೊಂದು ಕಡೆ ಮುಸ್ಲಿಂ ಓಲೈಕೆಗೆ ಆರ್​ಎಸ್​ಎಸ್​ ಅಟ್ಯಾಕ್ ಮಾಡುತ್ತಿದ್ದೀನಿ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದನ್ನು ನಂಬಬೇಕು ಎಂದರು. ಬಿಜೆಪಿ, ಕಾಂಗ್ರೆಸ್ ತಾವು ಮಾಡಿದ ಅಭಿವೃದ್ಧಿ ಮೇಲೆ ಮತ ಕೇಳಲಿ. ಅದು ಬಿಟ್ಟು ರಾಜಕೀಯ ಬೆರೆಸಿ ಮತಯಾಚನೆ ಮಾಡುವುದು ಬೇಡ ಎಂದು ಹೇಳಿದರು.

ಹಿಂದೂತ್ವದ ಹೆಸರಿನಲ್ಲಿ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಹಿಂದೂಗಳ ವೋಟಿಗಾಗಿ ಬಿಜೆಪಿ ಇಷ್ಟು ಕೆಳಮಟ್ಟಕ್ಕೆ ಇಳಿದಿದೆ. ಇವರಂತೆ ಸ್ವಾರ್ಥಕ್ಕಾಗಿ ದೇಶ ಒಡೆಯುವ ಕೆಲಸ‌ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಆರ್​ಎಸ್​ಎಸ್​ ತಯಾರು ಮಾಡುತ್ತಿದೆ ಎಂಬ ತಮ್ಮ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ನೀಡಿದ ತೀರುಗೇಟಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ‌ನೀಡಿದರು. ಆರ್​ಎಸ್​ಎಸ್​ ಐಎಎಸ್, ಐಪಿಎಸ್ ಗಳನ್ನು ರೆಡಿ ಮಾಡುವುದರಲ್ಲಿ ತಪ್ಪೇನು ಇಲ್ಲ. ನಾನು ಆರ್​ಎಸ್​ಎಸ್​ ತಪ್ಪು ಮಾಡ್ತಾ ಇದೆ ಅಂತ ಎಲ್ಲಿಯೂ ಹೇಳಿಲ್ಲ ಎಂದರು.

ಯತ್ನಾಳ್​ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.‌ ನಾನು ಆರ್​ಎಸ್​ಎಸ್​ ಪ್ರಚಾರಕ ಪ್ರಧಾನಿ ಆಡಳಿತದ ಅಧಿಕಾರವನ್ನು ಅಧಿಕಾರಿಗಳಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ಹೀಗಾದ್ರೆ ಚುನಾವಣೆ, ಪ್ರಜಾಪ್ರಭುತ್ವ ಏಕೆ ಬೇಕು. ಶಾಸಕರು ಏಕೆ ಬೇಕು? ಎಂದು ಪ್ರಶ್ನಿಸಿದರು.

ಓದಿ: ರಾಷ್ಟ್ರಪತಿಗಳಿಂದ ಸಿಮ್ಸ್ ಆಸ್ಪತ್ರೆ ಲೋಕಾರ್ಪಣೆ: ಕರ್ನಾಟಕ, ಮೈಸೂರು ಒಡೆಯರ್ ನೆನೆದ ಕೋವಿಂದ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.