ಮುದ್ದೇಬಿಹಾಳ(ವಿಜಯಪುರ): ನಾಲತವಾಡ ಪಟ್ಟಣದ ನಿವಾಸಿ ಗುತ್ತಿಗೆದಾರರಾದ ಜಗದೀಶ ಇಲಕಲ್ ಹಾಗೂ ತಾಯಿ ನಾಗರತ್ನ ಅವರ ಪುತ್ರಿ ವಿದ್ಯಾಶ್ರೀ 7 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಗುಲಬರ್ಗಾ ಯುನಿವರ್ಸಿಟಿಯ ಎಂಎಸ್ಸಿ ಅಂತಿಮ ವರ್ಷದ ಮೈಕ್ರೋಬಯೋಲೋಜಿ ವಿಷಯದಲ್ಲಿ ಪ್ರಥಮ ರ್ಯಾಂಕ್ ಪಡೆದು 7 ಚಿನ್ನದ ಪದಕಗಳನ್ನು ಗಿಟ್ಟಿಸಿಕೊಂಡವರು.
ಕಳೆದ 2 ವರ್ಷಗಳಿಂದಲೂ ಸತತ ಅಭ್ಯಸಿಸಿ ನಾಲ್ಕು ಸೆಮಿಸ್ಟರ್ ಪರೀಕ್ಷೆ ಮಗಿಸಿ ನಂತರ ಯುನಿವರ್ಸಿಟಿಯಲ್ಲಿ ನಡೆದ ಪ್ರತಿ ಪರೀಕ್ಷೆಯಲ್ಲೂ ರ್ಯಾಂಕ್ ಪಡೆದಿದ್ದಾರೆ. ಸತತ ಸಾಧನೆಯ ಹಾದಿ ಕಂಡುಕೊಂಡ ವಿದ್ಯಾಶ್ರೀ ಇತರೇ ವಿದ್ಯಾರ್ಥಿನಿಯರೂ ಸಹ ಸಾಧನೆ ಮಾಡಲಿ ಎಂದು ಹರಸಿದ್ದಾರೆ.
ಪದಕ ವಿತರಣೆ: ಏ.27 ರಂದು ಗುಲಬರ್ಗಾ ಯುನಿವರ್ಸಿಟಿಯಲ್ಲಿ ನಡೆದ 39 ಹಾಗೂ 40ನೇ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲರಾದ ತಾವರಚಂದ್ ಗೆಹ್ಲೋತ್ ಅವರು ಸಾಧಕಿ ವಿದ್ಯಾಶ್ರೀ ಯವರಿಗೆ ಒಟ್ಟು 7 ಚಿನ್ನದ ಪದಕಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ಅಂಬಿಕಾ ವಿದ್ಯಾಸಂಸ್ಥೆ