ವಿಜಯಪುರ: ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿರುವ ರೈತರು ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಿದ್ದಾರೆ.
ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಹಾಗೂ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಲಾಗಿದ್ದು, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಒತ್ತಾಯಿಸಿದರು.
ಇಂಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿ ಆರಂಭಿಸಲು ಒತ್ತಾಯಿಸಿದ್ದು, ಸಮಗ್ರ ನೀರಾವರಿಗೆ ಸರ್ಕಾರ ಮಹತ್ವ ನೀಡಬೇಕೆಂದು ರೈತರು ಬೇಡಿಕೆ ಮುಂದಿಟ್ಟರು. ಹೆದ್ದಾರಿ ತಡೆದ ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಿದರು. ಬಳಿಕ ರೈತರು ಇಂಡಿ ತಹಶೀಲ್ದಾರ್ ಚಿದಂಬರಂ ಕುಲಕರ್ಣಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅಪಘಾತದಲ್ಲಿ 7 ಮಂದಿ ಸಾವಿಗೆ ಆರ್‌ಟಿಓ ಅಧಿಕಾರಿಗಳು ಸಹ ಹೊಣೆ: ಶಾಸಕ ಕೃಷ್ಣಾರೆಡ್ಡಿ