ವಿಜಯಪುರ : ಸುಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವುದು (lake dredging), ಶುದ್ಧ ಕುಡಿಯುವ ನೀರಿನ ಘಟಕ ( pure drinking water unit) ಸ್ಥಾಪನೆ ಮಾಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Dr. Veerendra Heggade) ಘೋಷಿಸಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಹೊಸ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಕಾರ್ಯಕ್ರಮಗಳ ಸೌಲಭ್ಯ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವರಿಗೂ ಎಲ್ಲ ರೀತಿಯ ಮೂಲಸೌಲಭ್ಯಗಳು ದೊರೆಯಬೇಕು ಎನ್ನುವ ಮೂಲ ಉದ್ದೇಶದಿಂದ ಈ ಸಂಘ ಸ್ಥಾಪಿಸಲಾಗಿದೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಯೋಜನೆ ಹಾಕಿಕೊಂಡಿದೆ.
ಆದರೆ, ಅದು ಮಹಿಳೆಯರಿಗೆ, ಬಡವರಿಗೆ ತಲುಪುತ್ತಿಲ್ಲ. ಹೀಗಾಗಿ, ಸಾವಿರಾರು ವರ್ಷಗಳಿಂದ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ.
ಎರಡು ಸಮುದಾಯದ ನಡುವಿನ ಬೆಸುಗೆಯಾಗಿ ನಮ್ಮ ಧರ್ಮಸ್ಥಳ ಸಂಘಟನೆ ಕೆಲಸ ಮಾಡುತ್ತಿದೆ. ಬಡವರು ಅನಾಥರಾಗಬಾರದು. ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯದ ಅರಿವು ಮೂಡಿಸುವ ಉದ್ದೇಶ ಸಂಘಟನೆಯ ಗುರಿ ಎಂದರು.
'ಬರದ ನಾಡು ವಿಜಯಪುರ ಜಿಲ್ಲೆ ಈಗ ನೀರಾವರಿಗೆ ಒಳಪಟ್ಟಿದೆ. ಪ್ರತಿವರ್ಷ ಉತ್ತಮ ಬೆಳೆ ತೆಗೆಯಲಾಗುತ್ತಿದೆ. ರೈತರು ಕೃಷಿ ಜತೆ ಬೇರೆ ಉದ್ಯಮದಲ್ಲಿ ತೊಡಗಿಕೊಳ್ಳಬೇಕು ಎನ್ನುವ ಉದ್ದೇಶ ತಮ್ಮದಾಗಿದೆ.
ಹೀಗಾಗಿ, ನಿಮ್ಮ ಸಂಘದಿಂದ ಹೈನುಗಾರಿಕೆಗೆ ಉತ್ತೇಜನ ನೀಡುವ ಯೋಜನೆಗಳನ್ನು ಹಾಕಿಕೊಳ್ಳಬೇಕು' ಎಂದು ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ. ಬಿ ಪಾಟೀಲ ಮನವಿ ಮಾಡಿದರು.
ಓದಿ: ಪದ್ಮಶ್ರೀ ಹಾಜಬ್ಬ ಸಂದರ್ಶನ: ಕಿತ್ತಲೆ ಹಣ್ಣಿಗೆ 'How Much' ಎಂದು ಕೇಳಿದಾಗ ಹುಟ್ಟಿಕೊಂಡಿತು ಶಾಲೆ ಕಟ್ಟುವ ಕನಸು!