ವಿಜಯಪುರ: ಜಿಲ್ಲೆಯಲ್ಲಿ ಹರಿಯುವ ಡೋಣಿ ನದಿ ಪ್ರವಾಹಕ್ಕೆ ತಾಳಿಕೋಟೆ ಬಳಿಯ ಹಳೆಯ ಸೇತುವೆ ಮುಳುಗಿದೆ. ಸೇತುವೆ ಮೇಲೆ 7 ರಿಂದ 8 ಅಡಿಯಷ್ಟು ನೀರು ಹರಿಯುತ್ತಿದೆ. ರಾಜ್ಯ ಹೆದ್ದಾರಿ 61 ರಲ್ಲಿ ಸಂಚಾರ ಬಂದ್ ಆಗಿದೆ. ಜನರು 50 ಕ್ಕೂ ಹೆಚ್ಚು ಕಿಲೋ ಮೀಟರ್ ಸುತ್ತು ಹಾಕಿ ಸಂಚರಿಸುವ ಅನಿವಾರ್ಯತೆ ಉಂಟಾಗಿದೆ.
ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ತಾಳಿಕೋಟೆ ಪಟ್ಟಣದ ಹೊರಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನೀರು ಸುತ್ತವರೆದಿದೆ. ದೇಗುಲದ ಅರ್ಧ ಭಾಗದವರೆಗೂ ಪ್ರವಾಹದ ನೀರು ಆವರಿಸಿಕೊಂಡಿದೆ. ಇನ್ನೊಂದೆಡೆ, ಹೊಸ ಸೇತುವೆಯೂ ಬಿರುಕು ಬಿಟ್ಟು ವಾಲಿದ್ದು ವಾಹನ ಸಂಚಾರ ನಿಷೇಧಿಸಲಾಗಿದೆ. ಆದ್ರೂ ಕೆಲ ಬೈಕ್ ಸವಾರರು ಅಪಾಯ ಲೆಕ್ಕಿಸದೇ ಓಡಾಡುತ್ತಿದ್ದಾರೆ.
ಇದನ್ನೂ ಓದಿ: ಡೋಣಿ ನದಿಯಲ್ಲಿ ಮತ್ತೆ ಪ್ರವಾಹ: ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾದ ಅನ್ನದಾತ