ವಿಜಯಪುರ: ಮುದ್ದೇಬಿಹಾಳ ತಾಲೂಕಿನಿಂದ ಮಕ್ಕಾ ಮದೀನಾಗೆ (ಹಜ್ ಯಾತ್ರೆಗೆ) ತೆರಳಿ ಸೌದಿಯಿಂದ ಮರಳಿ ಬಂದಿರುವ ದಂಪತಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ.
ಧಾರ್ಮಿಕ ಸ್ಥಳಕ್ಕೆ ಹೋಗಿ ಕಳೆದ ರಾತ್ರಿ ಬಂದಿದ್ದ ದಂಪತಿಗೆ ಸಣ್ಣ ಪ್ರಮಾಣದಲ್ಲಿ ಶೀತ, ಕೆಮ್ಮು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು, ತಪಾಸಣೆ ನಡೆಸಿದರು. ಮೊದಲಿಗೆ ವೈದ್ಯಕೀಯ ತಪಾಸಣೆಗೆ ದಂಪತಿ ನಿರಾಕರಿಸಿದರು.
ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಮನವೊಲಿಕೆ ಮಾಡಿದ ಬಳಿಕ ವೈದ್ಯರಿಂರ ತೀವ್ರ ತಪಾಸಣೆ ನಡೆಸಲಾಗಿದೆ. ತಪಾಸಣೆ ಬಳಿಕ ಜಿಲ್ಲಾ ಕೇಂದ್ರಕ್ಕೆ ದಂಪತಿಯನ್ನು ಕಳಿಸುವ ಸಾಧ್ಯತೆ ಇದೆ. ಥ್ರೋಟ್ (ಗಂಟಲು ದ್ರವ) ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಮೇಲೆ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.