ETV Bharat / state

ವಿಜಯಪುರ: ಭೀಕರ ರಸ್ತೆ ಅಪಘಾತದಲ್ಲಿ ಮಗು, ಬಾಣಂತಿ ಸೇರಿ ಮೂವರು ಸಾವು - ಕೊಲ್ಹಾರ ಪೊಲೀಸ್ ಠಾಣೆ

ಒಂದು ಕಾರನ್ನು ಇನ್ನೊಂದು ಕಾರು ಓವರ್​ಟೆಕ್​ ಮಾಡಲು ಹೋಗಿ ಎರಡೂ ಕಾರುಗಳು ಕೆಎಸ್​ಆರ್​ಟಿಸಿ ಬಸ್ಸಿಗೆ ಡಿಕ್ಕಿಯಾಗಿವೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

Bus and Cars Accident
ಭೀಕರ ರಸ್ತೆ ಅಪಘಾತ
author img

By

Published : Sep 1, 2022, 10:07 AM IST

Updated : Sep 1, 2022, 1:21 PM IST

ವಿಜಯಪುರ: ಕೆಎಸ್​ಆರ್​ಟಿಸಿ ಬಸ್ಸು ಹಾಗೂ ಎರಡು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಮೂರು ತಿಂಗಳ ಬಾಣಂತಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218 ರ ಕುಪ್ಪಕಡ್ಡಿ ಕ್ರಾಸ್ ಬಳಿ ಬುಧವಾರ ಸಂಜೆ ಸಂಭವಿಸಿದೆ.

ಗುಲ್ಬರ್ಗಾ ಜಿಲ್ಲೆಯ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ (25), ಸುಮನ್ (3 ತಿಂಗಳು) ಮಗು ಹಾಗೂ ಶರಣಮ್ಮ ಬಸವರಾಜ್ ಕಲಶೆಟ್ಟಿ (55) ಘಟನೆಯಲ್ಲಿ ಮೃತಪಟ್ಟ ಒಂದೇ ಕುಟುಂಬದ ದುರ್ದೈವಿಗಳು. ಅಪಘಾತದಲ್ಲಿ ಇದೇ ಕುಟುಂಬದ ಉಮೇಶ ಕಲಶೆಟ್ಟಿ ಮತ್ತು ಅವರ ಪತ್ನಿ ಸುರೇಖಾ ಕಲಶೆಟ್ಟಿ, ಮಕ್ಕಳಾದ 8 ತಿಂಗಳ ಸಮನ್ ಹಾಗೂ 2 ವರ್ಷದ ಸಾನ್ವಿ ಗಂಭೀರ ಗಾಯಗೊಂಡಿದ್ದು ಅವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭೀಕರ ರಸ್ತೆ ಅಪಘಾತ

ಬಾಗಲಕೋಟೆಯಿಂದ ವಿಜಯಪುರಕ್ಕೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಎದುರಿಗೆ ಗುಲ್ಬರ್ಗಾದಿಂದ ಬರುತ್ತಿದ್ದ ಕುಲಶೆಟ್ಟಿ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ವಿಜಯಪುರ ಮೂಲದ ಕಾರೊಂದನ್ನು ಓವರ್​ಟೆಕ್ ಮಾಡಲು ಹೋಗಿ ಎರಡು ಕಾರುಗಳು ಬಸ್​ಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಇನ್ನೊಂದು ಕಾರು ವಿಜಯಪುರದ ಮೂಲದ್ದಾಗಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ವಿಜಯಪುರ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಯಚೂರು: ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಐವರು ಸಾವು

Last Updated : Sep 1, 2022, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.