ವಿಜಯಪುರ: ಮಹಾಮಾರಿ ಕೊರೊನಾ ಮುಂದುವರಿದ ಭಾಗ ಬ್ಲ್ಯಾಕ್ಫಂಗಸ್ ಪ್ರಕರಣ ಜಿಲ್ಲೆಯಲ್ಲಿ ಈಗ 97ಕ್ಕೆ ಏರಿಕೆಯಾಗಿದೆ. ಇವರಲ್ಲಿ 18 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಕೊರೊನಾ ಸೊಂಕಿತರು ಗುಣಮುಖರಾದ ಮೇಲೆ ಅವರಲ್ಲಿ ಬ್ಲ್ಯಾಕ್ ಫಂಗಸ್ ಗುಣ ಲಕ್ಷಣ ಕಂಡು ಬಂದವರನ್ನು ಪರೀಕ್ಷಿಸಲಾಗಿ ಅವರಲ್ಲಿ ಇಲ್ಲಿಯವರೆಗೆ 97ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಇವರಲ್ಲಿ 13ರೋಗಿಗಳು ಬೇರೆ ರಾಜ್ಯದವರಾಗಿದ್ದು, ಅವರ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಇನ್ನು 66 ರೋಗಿಗಳು ವಿಜಯಪುರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೊರೊನಾ ಹೆಮ್ಮಾರಿಯಿಂದ ಗುಣಮುಖರಾದವರಿಗೆ ಇದು ತಗಲುತ್ತಿದೆ. ಈ ವರೆಗೆ 97 ಬ್ಲ್ಯಾಕ್ ಫಂಗಸ್ ಪ್ರಕರಣ ಜಿಲ್ಲೆಯಲ್ಲಿ ಪತ್ತೆ ಆಗಿರುವುದು ಆತಂಕ ಮೂಡಿಸಿದೆ ಎಂದು ತಿಳಿಸಿದ್ದಾರೆ. ಅಲ್ಲಿಯವರೆಗೆ ನಾರ್ಮಲ್ ಕೋರ್ಸ್ ನಂತೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.