ವಿಜಯಪುರ : ಲಾಕ್‌ಡೌನ್ ಮಧ್ಯೆಯೂ ಭೀಮಾತೀರದ ಹಂತಕ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿರುವ ಧರ್ಮರಾಜ್ ಚಡಚಣ ಹುಟ್ಟುಹಬ್ಬವನ್ನು ಕಳೆದ ರಾತ್ರಿ ಆತನ ಅಭಿಮಾನಿಗಳು ಆಚರಿಸಿದ್ದಾರೆ.
ಚಡಚಣ ತಾಲೂಕಿನ ಕೊಂಕಣಗಾಂವನಲ್ಲಿರುವ ಧರ್ಮರಾಜ್ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಲಾಗಿದೆ. ಹಂತಕ ಧರ್ಮರಾಜ್ ಸತ್ತರು ಆತನ ಹವಾ ಮಾತ್ರ ಇನ್ನೂ ನಿಂತಿಲ್ಲ. ಸಾಮಾಜಿಕ ಅಂತರ ಇಲ್ಲದೇ ಮಾಸ್ಕ್ ಧರಿಸದೆ ಹಂತಕನ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿದ್ದಾರೆ.
ಲಾಕ್‌ಡೌನ್, ಕೊರೊನಾ ನಡುವೆಯು ಹಂತಕ ಧರ್ಮರಾಜ್ ಚಡಚಣನ ಹವಾ ನಿಂತಿಲ್ಲ. ನಕಲಿ ಎನ್ಕೌಂಟರ್ನಲ್ಲಿ ಹಂತಕ ಧರ್ಮರಾಜ್ ಚಡಚಣ ಸಾವನ್ನಪ್ಪಿದ್ದ. ಧರ್ಮನ ಬೆಂಬಲಿಗರು, ಅಭಿಮಾನಿಗಳಿಂದ ಆತನ ಹುಟ್ಟುಹಬ್ಬ ಆಚರಿಸಲಾಗಿದೆ.