ವಿಜಯಪುರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಗೋಲಗುಮ್ಮಟ ಪೊಲೀಸರು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಶಾಸ್ತ್ರಿ ನಗರದ ಸಚಿನ್ ಪವಾರ್, ಇಬ್ರಾಹಿಂ ರೋಜಾ ನಿವಾಸಿ ದಿಲೀಪ್ ಬೃಂಗಿ ಹಾಗೂ ರಾಮನಗರದ ಜಾವೇದ್ ಹುಸೇನ್ ಸಾಹೇಬ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಸಿಂದಗಿ ನಾಕಾ ಬಳಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅವರಿಂದ 64,900 ರೂ. ನಗದು, ಒಂದು ಕಾರು ಹಾಗೂ 11 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.