ETV Bharat / state

ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ: ಭೂಮಿ ಪೂಜೆ ನೆರವೇರಿಸಿದ ಕಾರಜೋಳ

ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಡಿಸಿಎಂ ಗೋವಿಂದ ಕಾರಜೋಳ ಗುದ್ದಲಿ ಪೂಜೆ ಮಾಡಿದ್ರು. ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿಯ 1.17ಕೋಟಿ ರೂ. ಅನುದಾನದಲ್ಲಿ ವೃತ್ತ ನಿರ್ಮಾಣ ಹಾಗೂ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುವುದು. ಬರುವ ನವೆಂಬರ್ ಅಥವಾ ಸಂವಿಧಾನ ಸಮರ್ಪಣಾ ದಿನವಾದ ಜ. 26ರಂದು ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

Ambedkar Bronze Statue
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗುದ್ದಲಿ ಪೂಜೆ
author img

By

Published : Feb 15, 2021, 4:59 PM IST

ವಿಜಯಪುರ: ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗುದ್ದಲಿ ಪೂಜೆ ನೆರವೇರಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಗುದ್ದಲಿ ಪೂಜೆ

ಈ ವೇಳೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿಯ 1.17ಕೋಟಿ ರೂ. ಅನುದಾನದಲ್ಲಿ ವೃತ್ತ ನಿರ್ಮಾಣ ಹಾಗೂ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುವುದು. ಕರ್ನಾಟಕದಲ್ಲಿಯೇ ಮಾದರಿ ಪುತ್ಥಳಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಬರುವ ನವೆಂಬರ್ ಅಥವಾ ಸಂವಿಧಾನ ಸಮರ್ಪಣಾ ದಿನವಾದ ಜ. 26ರಂದು ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಓದಿ: ಅಲ್ರೀ ನನಗಿನ್ನೂ ನೋಟಿಸ್‌ ಬಂದಿಲ್ಲ, ನಿಮ್‌ ಕಡೆಗೇನಾದ್ರೂ ಇದ್ರೇ ತೋರಿಸ್ರಲ್ಲ.. ಮಾಧ್ಯಮದವರಿಗೆ ಯತ್ನಾಳ್‌ ಮಾರುತ್ತರ

ಇದಕ್ಕೂ ಮೊದಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಶಾಸಕರಾದ ಎಂ.ಬಿ. ಪಾಟೀಲ, ದೇವಾನಂದ ಚವ್ಹಾಣ, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ನೂತನ ವೃತ್ತ ನಿರ್ಮಾಣ ಹಾಗೂ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.