ವಿಜಯಪುರ: ಆಕಸ್ಮಿಕವಾಗಿ ತಾಯಿ ಮತ್ತು ಮಗು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಆಸಂಗಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕವಿತಾ ವಿಠ್ಠಲ ಘತ್ತರಗಿ ಉರ್ಫ್ ಜಮಾದಾರ (30), ಅಮೃತೇಶ ಘತ್ತರ ಗಿ(5) ಮೃತ ತಾಯಿ-ಮಗ. ಮಗು ಕಾಲು ಜಾರಿ ಬಾವಿಗೆ ಬಿದ್ದಾಗ ಬಟ್ಟೆ ತೊಳೆಯುತ್ತಿದ್ದ ತಾಯಿ ಮಗುವನ್ನು ಕಾಪಾಡಲು ಮುಂದಾಗಿದ್ದಾರೆ. ಈ ವೇಳೆ ತಾಯಿಯೂ ಕೂಡ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.
ಸುಮಾರು ವರ್ಷದಿಂದ ಇವರು ಬೇರೆಯವರ ತೋಟದಲ್ಲಿ ಕೆಲಸಕ್ಕಿದ್ದರು. ನಂತರ ಅಲ್ಲಿಯೇ ಖಾಯಂ ಆಗಿ ಉಳಿದಿದ್ದರು. ತಾಯಿ, ಮಗು ಇಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.