ಶಿರಸಿ : ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಯುವಕನೊರ್ವ ನಿಯಂತ್ರಣ ತಪ್ಪಿ ಬಿದ್ದು ಸ್ಥಳದಲ್ಲೆ ಸಾವಿಗೀಡಾದ ಘಟನೆ ತಾಲೂಕಿನ ಬನವಾಸಿ ಸಮೀಪದ ಬಂಕನಾಳದಲ್ಲಿ ನಡೆದಿದೆ.
ಬಂಕನಾಳದ ಆನಂದ ವಾಸು ವಾಲ್ಮೀಕಿ (21) ಸಾವಿಗೀಡಾದ ಯುವಕ. ಈತ ತನ್ನ ಬೈಕ್ ಮೇಲೆ ಬರುವಾಗ ಅತಿ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದು ಮೃತನಾಗಿದ್ದಾನೆ.
ಘಟನೆ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.