ETV Bharat / state

ನೂರಕ್ಕೆ ನೂರರಷ್ಟು ಗೆಲುವು ನಮ್ಮದೇ: ಎಂ.ಕುಬೇರಪ್ಪ ವಿಶ್ವಾಸ - Western Graduate Constituency Election

ನಮ್ಮದೇ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುತ್ತಾರೆ ಅನ್ನೋದು ನಮಗೆ ಸಂಪೂರ್ಣ ವಿಶ್ವಾಸವಿದೆ. ನೂರಕ್ಕೆ ನೂರರಷ್ಟು ಗೆಲುವು ನಮ್ಮದೇ ಎಂದು‌ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

We will definitely win the election: M Kuberappa Confidence
ಅಭ್ಯರ್ಥಿ ಎಂ.ಕುಬೇರಪ್ಪ
author img

By

Published : Oct 17, 2020, 9:20 PM IST

Updated : Oct 17, 2020, 11:37 PM IST

ಶಿರಸಿ : ಪದವಿ ಶಿಕ್ಷಕರ ಹುದ್ದೆ 25 ವರ್ಷಗಳಿಂದ ಖಾಲಿ ಇತ್ತು. 25 ವರ್ಷ ಆರಿಸಿ ಬಂದ ಪದವಿ ಕ್ಷೇತ್ರದ ಸದಸ್ಯರು, ಶಾಸಕರು, ಸಂಸದರು ಯಾರೂ ಕೂಡ ಇದಕ್ಕೆ ಸ್ಪಂದಿಸಿರಲಿಲ್ಲ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕುಬೇರಪ್ಪ ಆರೋಪಿಸಿದರು.

ಸಿದ್ದಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ನಾನು ಸಿದ್ದರಾಮಯ್ಯ ಅವರ ಹತ್ತಿರ ಮಾತನಾಡಿ ಶಿಕ್ಷಕರ ಹುದ್ದೆಗಳನ್ನ ತುಂಬಿಸಿದ್ದು, ಇದು ನನ್ನ ಸಾಧನೆಯಾಗಿದೆ ಎಂದರು.

ಈ ಚುನಾವಣೆಯನ್ನ ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಇದು ಹೆಚ್​​.ಕೆ ಪಾಟೀಲರು 4 ಬಾರಿ ಆರಿಸಿ ಬಂದಿದ್ದ ಕ್ಷೇತ್ರವಾಗಿದ್ದು, ಈ ಕ್ಷೇತ್ರ ಹಿಂದೆ ನಮ್ಮದೇ ಆಗಿತ್ತು. ಆದರೆ, ಕೆಲವು ಕಾರಣಗಳಿಂದ ಎರಡು ಸಲ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಅಧಿಕಾರ ಸಿಕ್ಕಿಲ್ಲ. ಹಿನ್ನಡೆ ಏಕಾಗಿತ್ತು ಅನ್ನೋದನ್ನ ತಿಳಿದು ಈಗ ಸರಿಪಡಿಸಲಾಗಿದೆ ಎಂದರು.

ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕುಬೇರಪ್ಪ

ನಮ್ಮದೇ ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡುತ್ತಾರೆ ಅನ್ನೋದು ನಮಗೆ ಸಂಪೂರ್ಣ ವಿಶ್ವಾಸವಿದೆ. ನೂರಕ್ಕೆ ನೂರರಷ್ಟು ಗೆಲುವು ನಮ್ಮದೇ ಎಂದು‌ ಇದೇ ವೇಳೆ, ವಿಶ್ವಾಸ ವ್ಯಕ್ತಪಡಿಸಿದರು.

Last Updated : Oct 17, 2020, 11:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.