ETV Bharat / state

ಉತ್ತರ ಕನ್ನಡ ಜಿಲ್ಲಾಧಿಕಾರಿ ಬಹಿರಂಗ ಸವಾಲು.. ಯಾಕೆ ಗೊತ್ತಾ?

ಚುನಾವಣಾ ಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿ ಸುಳ್ಳು ವದಂತಿ ಹಬ್ಬಿಸುವವರಿಗೆ ಕಾರವಾರ ಜಿಲ್ಲಾಧಿಕಾರಿ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಕಾರವಾರ ಜಿಲ್ಲಾಧಿಕಾರಿ ಖಡಕ್​ ವಾರ್ನಿಂಗ್​
author img

By

Published : Mar 9, 2019, 4:56 PM IST

ಕಾರವಾರ: ಇವಿಎಂ ಮಷಿನ್​ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜನರಿಗೆ ಸುಳ್ಳು ಮಾಹಿತಿ ಹರಿದುಬಿಡುವವರಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದು, ಮಷಿನ್ ಹ್ಯಾಕ್ ಮಾಡಿ ತೋರಿಸುತ್ತೇವೆ ಎನ್ನುವವರಿಗೆ ಅವರು ಬಹಿರಂಗ ಸವಾಲು ಹಾಕಿದ್ದಾರೆ.

ಲೋಕಸಭಾ ಚುನವಣಾ ಪೂರ್ವ ಸಿದ್ದತೆಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಇವಿಎಂ ಮಷಿನ್​ಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಡಾ.ಕೆ ಹರೀಶ್ ಕುಮಾರ್, ಕೆಲವರು ಇವಿಎಂ ಮಷಿನ್​ಗಳ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಾರೆ. ಅದನ್ನು ಹ್ಯಾಕ್ ಮಾಡಲು ಸಾಧ್ಯ. ಅದರಲ್ಲಿರುವ ಬಟನ್​ಗಳನ್ನು ಒತ್ತಿದಾಗ ಒಬ್ಬರಿಗೆ ಮತಗಳು ಹೋಗುವಂತೆ ಮಾಡಲು ಸಾಧ್ಯ ಎಂದು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತದೆ.
ಆದರೆ ಇವಿಎಂ ಮಷಿನಿನಲ್ಲಿ ಅಂತಹ ಯಾವುದೇ ಅವಕಾಶವಿಲ್ಲ. ಇಲ್ಲಿ ಯಾವುದನ್ನು ಹ್ಯಾಕ್ ಮಾಡುವುದಾಗಲಿ ಅಥವಾ ಮತ ಚಲಾವಣೆ ಬಳಿಕ ಓಪನ್ ಮಾಡುವುದಾಗಲಿ ಸಾಧ್ಯವಿಲ್ಲ. ನಾವು ಯಾರಿಗೆ ಮತ ಚಲಾವಣೆ ಮಾಡುತ್ತೇವೆಯೊ ಅವರಿಗೆ ಹೋಗುತ್ತದೆ. ಅಲ್ಲದೆ ಚುನಾವಣೆ ಪೂರ್ವದಲ್ಲಿ ಎಲ್ಲವೂ ಆಯಾ ಪಕ್ಷಗಳ ಎಂಜೆಂಟರುಗಳ ಮತ್ತು ಚುನಾವಣಾ ವೀಕ್ಷಣಾ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಯುತ್ತದೆ ಎಂದು ಹೇಳಿದರು.

ಇನ್ನೂ ಇಷ್ಟಾದರು ಅನುಮಾನವಿದ್ದು, ನಾವು ಇವಿಎಂ ಹ್ಯಾಕ್ ಇಲ್ಲವೇ ಮೊಬೈಲ್ ಕನೆಕ್ಟ್ ಮಾಡುತ್ತೇವೆ ಎಂದು ಹೇಳುವವರಿಗೆ ಮುಕ್ತ ಅವಕಾಶವನ್ನು ನೀಡುತ್ತೇವೆ. ಅಂತವರು ಬಂದು ಇವಿಎಂ ಮಷಿನ್ ಮೇಲೆ ನಿಮ್ಮ ಪ್ರಯೋಗ ನಡೆಸಬಹುದು. ಆದರೆ ಸುಮ್ಮನೆ ಸುಳ್ಳು ಸುದ್ದಿ ಇಲ್ಲವೆ ಜನರಲ್ಲಿ ಗೊಂದಲಗಳನ್ನು ಉಂಟು ಮಾಡುವುದು ಸರಿಯಲ್ಲ. ಈ ಬಗ್ಗೆ ತಿಳಿದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಬಳಿಕ ಮತದಾನದ ಜಾಗೃತಿ ಕುರಿತು ಮಾಹಿತಿ ನೀಡಿದ ಸ್ವೀಪ್ ಕಮಿಟಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಓ ಎಂ ರೋಶನ್​, ಜಿಲ್ಲೆಯಾದ್ಯಂತ ಮತದಾನದ ಕುರಿತು ವಿವಿಧ ರಿತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಕಾಲೇಜು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಇವಿಎಂ ಮಷಿನ್​ಗಳಲ್ಲಿ ಮತದಾನ ಮಾಡುವುದು ಹೇಗೆ ಎನ್ನುವುದರ ಬಗ್ಗೆ ತಿಳಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಾದ್ಯಂತ 2990 ಜನರಿಗೆ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದು ಹೇಳಿದರು.

ಇನ್ನೂ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗುವಂತೆ ಮಾಡಲು‌ ಈಗಾಗಲೇ ಎಲ್ಲ ರಿತಿಯ ಪ್ರಯತ್ನ ನಡೆಸಿದ್ದು, ಜಿಲ್ಲೆಯಲ್ಲಿರುವ 14 ಸಾವಿರ ಅಂಗವಿಕಲರನ್ನು ಮತದಾನಕ್ಕೆ ಮನೆಯಿಂದ ಕರೆದುಕೊಂಡು ಹೋಗಿ ತಂದು ಬಿಡುವ ವ್ಯವಸ್ಥೆ ಬಗ್ಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಮತದಾನ ಜಾಗೃತಿ ಕುರಿತ ನಾಟಕ, ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

Intro:Body:

DC Sheela

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.