ETV Bharat / state

ಶಿರಸಿಯಲ್ಲಿ ಗಮನ ಸೆಳೆದ ಮಲೆನಾಡು ಮೇಳ : ಇಲ್ಲಿ ಮಹಿಳೆಯರದ್ದೇ ಕಾರುಬಾರು - malenada mela

ಶಿರಸಿಯಲ್ಲಿ ಮಲೆನಾಡು ಮೇಳವನ್ನು ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಬಗೆಬಗೆಯ ಸಸಿಗಳು, ತಿಂಡಿ ತಿನಿಸುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ ಈ ಮೇಳವನ್ನು ಕಳೆದ 18 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದ್ದು, ಮಹಿಳೆಯರಿಗೆ ಹೊಸ ಹೊಸ ವಸ್ತುಗಳ ಪರಿಚಯದ ವೇದಿಕೆಯಾಗಿ ಈ ಮೇಳ ಪರಿಣಮಿಸಿದೆ.

ಮಲೆನಾಡು ಮೇಳ
author img

By

Published : Jun 25, 2019, 5:42 AM IST

Updated : Jun 25, 2019, 6:03 AM IST

ಶಿರಸಿ: ನನಗೊಂದು ತನಗೊಂದು ಎಂದು ಹೂ ಗಿಡಗಳನ್ನ ಖರೀದಿಸುತ್ತಿರೋ ಮಹಿಳೆಯರು. ಅಷ್ಟೇ ಉತ್ಸಾಹದಿಂದ ತಾವು ತಂದ ಬೀಜ, ಗಡ್ಡೆ-ಗೆಣಸುಗಳನ್ನು ಮಾರುವ ಗೃಹಿಣಿಯರು. ಇನ್ನೊಂದೆಡೆ ಬಗೆ ಬಗೆಯ ತಿಂಡಿ ತಿನಿಸುಗಳು... ಇದೆಲ್ಲ ಕಂಡುಬಂದಿದ್ದು ಶಿರಸಿಯಲ್ಲಿ ನಡೆದ ಮಲೆನಾಡು ಮೇಳದಲ್ಲಿ.

ಕಳೆದ 18 ವರ್ಷಗಳಿಂದ ಇಲ್ಲಿನ ವನಸ್ತ್ರಿ ಮಹಿಳಾ ಸಂಘ ನಡೆಸುತ್ತಿರುವ 'ಮಲೆನಾಡು ಮೇಳ'ವನ್ನು ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಲಾಗಿತ್ತು. ಇಲ್ಲಿ ಮನೆ ಅಂಗಳ, ಹಿತ್ತಲಿನಲ್ಲಿ ಬೆಳೆಯಬಹುದಾದ ಅಪರೂಪದ ಹೂವಿನ ಗಿಡಗಳು, ತರಕಾರಿ ಬೀಜಗಳು, ಹಣ್ಣಿನ ಗಿಡಗಳು, ಔಷಧಿ ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಲ್ಲದೆ ವನಸ್ತ್ರೀ ಸಂಘದ ಸದಸ್ಯರು ಬಿಡುವಿನ ವೇಳೆ ಮನೆಯಲ್ಲೇ ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಎಲ್ಲವನ್ನೂ ಮೇಳದಲ್ಲಿ ಮಾರಾಟಕ್ಕಿಡಲಾಗಿತ್ತು.

ಶಿರಸಿಯಲ್ಲಿ ಮಲೆನಾಡು ಮೇಳ

ವಸ್ತು ಪ್ರದರ್ಶನದ ಜೊತೆಗೆ ಮೇಳದಲ್ಲಿ ಕಾಡು ಹಣ್ಣುಗಳ ಸಿಹಿ ಹಾಗೂ ಖಾರದ ತಿನಿಸುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 140ಕ್ಕೂ ಹೆಚ್ಚು ಬಗೆಯ ತಿಂಡಿಗಳನ್ನು ತಯಾರಿಸಿ ಸ್ಪರ್ಧೆಗೆ ಇಡಲಾಗಿತ್ತು. ಇದು ಮಹಿಳೆಯರ ಅಡುಗೆ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಅಲ್ಲದೆ ಈ ಮೇಳವು ಮಹಿಳೆಯರಿಗೆ ವಿಶಿಷ್ಟ ತಿನಿಸುಗಳ ಪರಿಚಯದ ಸಂತೆಯಂತಿತ್ತು.

Intro:ಶಿರಸಿ :
ಇಂದಿನ ಆಧುನಿಕ ಜೀವನದ ಜಂಜಾಟದಲ್ಲಿ ತರಕಾರಿ ಬೀಜಗಳನ್ನ ಕಾಯ್ದಿಟ್ಟುಕೊಳ್ಳುವ, ಮಡಿಮಾಡಿ ಸಸಿಗಳನ್ನು ಬೆಳೆಸುವುದಾಗಲು ಕಷ್ಟ. ಆದರೆ ಶಿರಸಿಯ ವನಸ್ತ್ರೀ ಸಂಘಟನೆ ಕೆಲ ವರ್ಷಗಳಿಂದ ಮುಂಗಾರು ಆರಂಭದಲ್ಲಿ 'ಮಲೆನಾಡು ಮೇಳ ಆಯೋಜಿಸಿ ಮಹಿಳೆಯರಿಗೆ ಬೇಕಾಗುವ ವಿವಿಧ ಸಸ್ಯಗಳನ್ನ ಗ್ರಹೋಪಯೋಗಿ ವಸ್ತುಗಳನ್ನ ಮಾರಾಟ ಮಾಡುವ ವ್ಯವಸ್ಥೆ ಮಾಡುವ ಮೂಲಕ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿದೆ.

Body:ನನಗೊಂದು ತನಗೊಂದು ಎಂದು ಹೂ ಗಿಡಗಳನ್ನ ಖರೀದಿಸುತ್ತಿರೋ ಮಹಿಳೆಯರು. ಅಷ್ಟೇ ಉತ್ಸಾಹದಿಂದ ತಾವು ತಂದ ತಿಂಡಿ-ತಿನಿಸುಗಳನ್ನ, ಬೀಜ, ಗಡ್ಡೆ-ಗೆಣಸುಗಳನ್ನು ಮಾರುವ ಗೃಹಿಣಿಯರು. ಇನ್ನೊಂದೆಡೆ ಬಗೆ ಬಗೆಯ ತಿಂಡಿ ತಿನಿಸುಗಳು ಇದೆಲ್ಲ ಕಂಡುಬಂದಿದ್ದು, ಶಿರಸಿಯಲ್ಲಿ ನಡೆದ ಮಲೆನಾಡು ಮೇಳದಲ್ಲಿ. ಕಳೆದ ೧೯ ವರ್ಷಗಳಿಂದ ಇಲ್ಲಿನ ವನಸ್ತ್ರಿ ಮಹಿಳಾ ಸಂಘ ನಡೆಸುತ್ತಿರುವ ವನಸ್ತ್ರೀ ಮೇಳವನ್ನು ಇಲ್ಲಿನ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜನೆ ಮಾಡಲಾಗಿತ್ತು. ಇಲ್ಲಿ ಮನೆ ಅಂಗಳ ಅಥವಾ ಹಿತ್ತಲಿನಲ್ಲಿ ಬೆಳೆಸ ಬಹುದಾದ ಅಪರೂಪದ ಹೂವಿನ ಗಿಡಗಳು, ತರಕಾರಿ ಬೀಜಗಳು, ಹಣ್ಣಿನ ಗಿಡಗಳು, ಔಷಧಿ ಗಿಡಗಳನ್ನು ಮಾರಾಟಕ್ಕೆ ಇಡಲಾಗಿತ್ತು. ವನಸ್ತ್ರೀ ಸಂಘದ ಸದಸ್ಯರು ಬಿಡುವಿನ ವೇಳೆ ಮನೆಯಲ್ಲೇ ತಯಾರಿಸಿದ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಎಲ್ಲವೂ ಮೇಳದಲ್ಲಿತ್ತು. ಹೋವಿನ ಗಿಡ, ತರಕಾರಿ ಬೀಜಗಳನ್ನು ಸಂಗ್ರಹಿಸಿದ ಮಹಿಳೆಯರಿಗೆ ಇದು ಮಾರಾಟದ ವೇದಿಕೆ. ಅದೇರೀತಿ ಗಿಡ ಬೆಳೆಸುವ ಆಸಕ್ತರಿಗೆ ಖರೀದಿ ಕೇಂದ್ರದಂತೆ ಮೇಳ ಸಹಕಾರಿಯಾಗಿದೆ.
ಬೈಟ್ (೧)
ಶುಭಾ ಹೆಗಡೆ , ಗೃಹಿಣಿ ಹಾಗೂ ಆಯೋಜಕಿ

ವಸ್ತು ಪ್ರದರ್ಶನದ ಜತೆಗೆ ಮೇಳದಲ್ಲಿ ಕಾಡು ಹಣ್ಣುಗಳ ಸಿಹಿ ಹಾಗೂ ಖಾರದ ತಿನಿಸುಗಳ ಸ್ರ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ 140 ಕ್ಕೂ ಹೆಚ್ಚು ಬಗೆಯ ತಿಂಡಿಗಳನ್ನು ತಯಾರಿಸಿ ಸ್ಪರ್ಧೆಗೆ ಇಡಲಾಗಿತ್ತು. ಇದು ಮಹಿಳೆಯರ ಅಡಿಗೆ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದು, ತೀರಾ ವಿಶಿಷ್ಠ ತಿನಿಸುಗಳ ಪರಿಚಯ ಮೇಳದಿಂದಾಗುತ್ತಿದೆ ಎಂದು ಮಹಿಳೆಯರು ತಿಳಿಸಿದರು.
........
ಸಂದೇಶ ಭಟ್ ಶಿರಸಿ. Conclusion:
Last Updated : Jun 25, 2019, 6:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.