ಕಾರವಾರ : ನಾಯಿ ಹಿಡಿಯಲು ಬಂದ ಚಿರತೆಯೊಂದು ಬೋನಿನಲ್ಲಿಯೇ ಸೆರೆಯಾಗಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿಯಲ್ಲಿ ನಡೆದಿದೆ.
ತಡರಾತ್ರಿ ಕಿಮಾನಿಯಲ್ಲಿ ಚಿರತೆ ನಾಯಿ ಬೆನ್ನಟ್ಟಿ ಬಂದು ಬೋನಿನಲ್ಲಿ ಸೆರೆಯಾಗಿದೆ. ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರ ಬಂದು ನೋಡಿದಾಗ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿರುವುದು ತಿಳಿದಿದೆ. ಕೂಡಲೇ ಧೈರ್ಯ ಮಾಡಿದ ಸ್ಥಳೀಯರು ಬೋನಿನ ಬಾಗಿಲು ಹಾಕಿದ್ದಾರೆ.
ಇದನ್ನೂ ಓದಿ: ಜಗಳ ಬಿಡಿಸಲು ಹೋದ ಕಾನ್ಸ್ಟೇಬಲ್ಗೆ ಕಲ್ಲಿನೇಟು: ನಿವೃತ್ತ ಎಎಸ್ಐ ಕುಟುಂಬದ ವಿರುದ್ಧ ದೂರು
ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ.