ETV Bharat / state

ಐತಿಹಾಸಿಕ ಗೆಲುವು ದಾಖಲಿಸಿದ ಮಂಕಾಳು ವೈದ್ಯ: ಸಚಿವ ಸ್ಥಾನಕ್ಕಾಗಿ ಬೆಂಬಲಿಗರ ಪಟ್ಟು - ಕರ್ನಾಟಕದ ಮುಖ್ಯಮಂತ್ರಿ

1 ಲಕ್ಷ ಮತಗಳನ್ನು ಪಡೆದ ಕಾಂಗ್ರೆಸ್‌ನ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.

Mankal vaidhya
ಮಂಕಾಳು ವೈದ್ಯ
author img

By

Published : May 16, 2023, 10:19 AM IST

ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತಿರುವ ಬೆಂಬಲಿಗರು

ಕಾರವಾರ(ಉತ್ತರ ಕನ್ನಡ): ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದೆ. ಒಂದೆಡೆ ಕಾಂಗ್ರೆಸ್ ಸರ್ಕಾರದ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಬೆನ್ನಲ್ಲೇ ಸಚಿವ ಸ್ಥಾನದ ಬೇಡಿಕೆಗಳೂ ಸಹ ತಲೆ ಎತ್ತಿವೆ. ಅದರಲ್ಲೂ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲೇ ಒಂದು ಲಕ್ಷ ಮತಗಳಿಂದ ಅಭೂತಪೂರ್ವ ಗೆಲುವು ಸಾಧಿಸಿದ ಮೀನುಗಾರ ಸಮುದಾಯದ ಶಾಸಕ ಮಂಕಾಳು ವೈದ್ಯಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರಿಂದ ಒತ್ತಾಯ ಕೇಳಿ ಬಂದಿದೆ.

ಚುನಾವಣಾ ಹಬ್ಬದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿ ಗೆಲುವಿನ ನಗೆ ಬೀರಿದೆ. ಡಬ್ಬಲ್ ಎಂಜಿನ್ ಸರ್ಕಾರವನ್ನು ತಿರಸ್ಕರಿಸಿದ ಮತದಾರ ಗ್ಯಾರಂಟಿಗಳ ಕೈಹಿಡಿದಿದ್ದು ಇದೀಗ ಸಿಎಂ ಯಾರಾಗ್ತಾರೆ ಎನ್ನುವ ಚರ್ಚೆ ನಡುವೆ ಸಚಿವ ಸ್ಥಾನದ ಲಾಭಿ ಸಹ ಆರಂಭವಾಗಿದೆ. ಅದರಲ್ಲೂ ಸಮುದಾಯಗಳ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಿಂದ ಮೀನುಗಾರರ ಸಮುದಾಯ ಇದೀಗ ಭಟ್ಕಳ ಶಾಸಕ ಮಂಕಾಳು ವೈದ್ಯ ಪರ ಬ್ಯಾಟಿಂಗ್ ಮಾಡಿದೆ.

ಜಿಲ್ಲೆಯಲ್ಲೇ ಅತೀ ಹೆಚ್ಚು ಅಂದರೆ 1 ಲಕ್ಷ ಮತಗಳನ್ನು ಪಡೆದ ಕಾಂಗ್ರೆಸ್‌ನ ಮಂಕಾಳು ವೈದ್ಯ ಬಿಜೆಪಿ ಅಭ್ಯರ್ಥಿ ಸುನಿಲ್​ ನಾಯ್ಕ ವಿರುದ್ಧ 32 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಭೇರಿ ಭಾರಿಸಿದ್ದಾರೆ. ಮಾತ್ರವಲ್ಲದೇ ಒಬ್ಬರೇ ಲಕ್ಷ ಮತಗಳನ್ನು ಪಡೆದಿರುವುದು ಜಿಲ್ಲೆಯ ಐತಿಹಾಸಿಕ ದಾಖಲೆಯಾಗಿದೆ. ಈ ಬಾರಿ ಮೀನುಗಾರ ಸಮುದಾಯದ ಮಂಕಾಳು ವೈದ್ಯರಿಗೆ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಸಮುದಾಯ ಮುಖಂಡರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾರವಾರದಲ್ಲಿ ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಗೆದ್ದ ಸತೀಶ್​ ಸೈಲ್: ಮೋಡಿ ಮಾಡದ ಮೋದಿ ಕ್ಯಾಂಪೇನ್

ಇನ್ನು ಭಟ್ಕಳ ಕ್ಷೇತ್ರದಿಂದ 2013 ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಮಂಕಾಳು ವೈದ್ಯ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದು ಬಳಿಕ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದರು. ನಂತರ 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಾದರೂ ಹಿಂದುತ್ವದ ಅಲೆಯಲ್ಲಿ ಸೋಲು ಕಾಣುವಂತಾಗಿದ್ದು ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಆದರೆ, ಈ ಬಾರಿ ಕ್ಷೇತ್ರದಲ್ಲಿ ಮಂಕಾಳು ವೈದ್ಯರಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಬಿಜೆಪಿ ವಿರೋಧಿ ಅಲೆಯೂ ಸಹ ಸಾಕಷ್ಟು ಬೆಂಬಲ ನೀಡಿದ್ದು ಒಂದು ಲಕ್ಷ ಮತಗಳನ್ನು ಪಡೆದು ಅಭೂತಪೂರ್ವ ಗೆಲುವು ದಾಖಲಿಸುವಂತಾಗಿದೆ. ಈ ಬಾರಿ ರಾಜ್ಯದ ಕರಾವಳಿಯಲ್ಲಿ ಮೀನುಗಾರ ಸಮುದಾಯದ ಯಾವುದೇ ಅಭ್ಯರ್ಥಿ ಗೆದ್ದಿಲ್ಲವಾದ್ದರಿಂದ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದು ಬೆಂಬಲಿಗರ ಅಭಿಪ್ರಾಯ.

ಇನ್ನು ಈ ಕುರಿತು ನಾನೇನು ಸನ್ಯಾಸಿಯಲ್ಲ ಎನ್ನುವ ಮೂಲಕ ಸಚಿವ ಸ್ಥಾನದ ಆಶಯವನ್ನು ಮಂಕಾಳು ವೈದ್ಯ ವ್ಯಕ್ತಪಡಿಸಿದ್ದು, ಪಕ್ಷದ ಆದೇಶದಂತೆ ನಡೆದುಕೊಳ್ಳೋದಾಗಿ ತಿಳಿಸಿದ್ದಾರೆ. ಒಟ್ಟಾರೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬೇಡಿಕೆ ಹೆಚ್ಚಾಗಿದ್ದು ಯಾರಿಗೆಲ್ಲ ಅವಕಾಶ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕು.

ಇದನ್ನೂ ಓದಿ: ಗೆಲುವಿಗಾಗಿ ಪ್ರಧಾನಿ‌ ಮೋದಿ ಕರೆಸಿದರೂ ಪ್ರಯೋಜನವಾಗಿಲ್ಲ: ಶಾಸಕ ಸತೀಶ್ ಸೈಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.