ETV Bharat / state

ಶಿರಸಿ ಮಾರಿಕಾಂಬಾ ದೇವಾಲಯ ಡಿಜಿಟಲ್​ ವ್ಯವಸ್ಥೆ ಯಶಸ್ವಿ: ತಿಂಗಳಲ್ಲಿ ಎಷ್ಟು ಲಕ್ಷ ಸಂಗ್ರಹ? - ಈಟಿವಿ ಭಾರತ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಾಲಯವು ಡಿಜಿಟಲ್​ ವ್ಯವಸ್ಥೆಯ ಮೂಲಕ ಕಾಣಿಕೆ ಮತ್ತು ಸೇವೆಯನ್ನು ನೀಡುವ ಮೂಲಕ ಇತರ ದೇವಸ್ಥಾನಗಳಿಗೆ ಮಾದರಿಯಾಗಿದೆ.

sirsi-marikamba-temple-digital-payment-system-successful
ಶಿರಸಿ ಮಾರಿಕಾಂಬಾ ದೇವಾಲಯ ಡಿಜಿಟಲ್​ ವ್ಯವಸ್ಥೆ ಯಶಸ್ವಿ : ಇತರ ದೇವಸ್ಥಾನಗಳಿಗೆ ಮಾದರಿ
author img

By

Published : Oct 18, 2022, 9:35 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಜಾರಿಗೆ ತಂದಿರುವ ಇ ಹುಂಡಿ ಮತ್ತು ಇ ಸೇವಾ ವ್ಯವಸ್ಥೆಯು ಭಕ್ತ ವಲಯದಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಜಾರಿಗೆ ತಂದ ಒಂದು ತಿಂಗಳಲ್ಲಿಯೇ 1 ಲಕ್ಷಕ್ಕೂ ಅಧಿಕ ಮೊತ್ತದ ಕಾಣಿಕೆ ಕ್ಯೂಆರ್ ಕೋಡ್ ಸ್ಕಾನಿಂಗ್ ಮೂಲಕ ಸಂಗ್ರಹವಾಗಿದೆ. ಇದರಿಂದ ಉಳಿದ ಸಣ್ಣ ಪುಟ್ಟ ದೇವಸ್ಥಾನಗಳಿಗೂ ಉಪಕಾರಿಯಾಗಿದ್ದು, ವಿವಿಧೆಡೆ ಕ್ಯೂ ಆರ್ ಕೋಡ್ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ದೇವಸ್ಥಾನದಲ್ಲಿ ಡಿಜಿಟಲ್​ ಕಾಣಿಕೆ ವ್ಯವಸ್ಥೆ : ದೇವಸ್ಥಾನಕ್ಕೆ ಪ್ರತಿ ದಿನ ಭೇಟಿ ನೀಡುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಕ್ಯೂ ಆರ್ ಕೋಡ್ ಮೂಲಕ ಇ ಹುಂಡಿ ಮತ್ತು ಇ ಸೇವಾ ನಿಯಮವನ್ನು ಜಾರಿಗೆ ತರಲಾಗಿದೆ. ಕಳೆದ ಆಗಸ್ಟ್​ 18 ರಂದು ಎಸ್​​ಬಿಐ ಅವರು ದೇವಾಲಯಕ್ಕೆ ಕ್ಯೂ ಆರ್ ಕೋಡ್​ ಅಳವಡಿಸಿ ಇಂಟರ್​​ನೆಟ್ ಮೂಲಕ ಪಾವತಿ ಸಂದಾಯ ಮಾಡಲು ಇ-ಹುಂಡಿ ಮತ್ತು ಇ-ಸೇವಾ ವ್ಯವಸ್ಥೆ ಮಾಡಿಕೊಟ್ಟಿದೆ. ಮಾರಿಕಾಂಭಾ ದೇವಾಲಯಕ್ಕೆ ಕಾಣಿಕೆ ಸಲ್ಲಿಸುವವರು ಸಮಯ ವ್ಯರ್ಥ ಮಾಡಿ ಸಾಲಿನಲ್ಲಿ ನಿಂತು ಕಾಣಿಕೆ ಹುಂಡಿಗೆ ಹಣವನ್ನು ಹಾಕಬೇಕಿಲ್ಲ. ಬದಲಾಗಿ ದೇವಸ್ಥಾನದ ಹೊರಗೆ ಇಲ್ಲವೇ ದೇವಸ್ಥಾನದ ಕಚೇರಿಯ ಹತ್ತಿರ ಅಳವಡಿಸಿರುವ ಇ-ಹುಂಡಿಗೆ ಮೊಬೈಲ್ ಬಳಸಿ ಇಂಟರ್ ನೆಟ್ ಮೂಲಕ ಹಣ ಪಾವತಿಸಬಹುದಾಗಿದೆ.

ಶಿರಸಿ ಮಾರಿಕಾಂಬಾ ದೇವಾಲಯ ಡಿಜಿಟಲ್​ ವ್ಯವಸ್ಥೆ ಯಶಸ್ವಿ : ಇತರ ದೇವಸ್ಥಾನಗಳಿಗೆ ಮಾದರಿ

ಡಿಜಿಟಲ್​ ಸ್ಕ್ಯಾನಿಂಗ್​ ಮೂಲಕ ಸೇವೆ ಮತ್ತು ಕಾಣಿಕೆ : ಇನ್ನು ಹೊರಗಡೆಯಿರುವವರು ದೇವಾಲಯದಿಂದ ಜಾತ್ರೆ, ನವರಾತ್ರಿ, ದಸರಾ ಸೇರಿದಂತೆ ಇನ್ನಿತರ ಮಹೋತ್ಸವಗಳಲ್ಲಿ ಕ್ಯೂ ಆರ್​ ಕೋಡ್​ ಮುದ್ರಿಸಿ ಭಕ್ತರಿಗೆ ಕಳಿಸುವ ಆಮಂತ್ರಣ ಪತ್ರಿಕೆಯಿಂದಲೂ ಕಾಣಿಕೆ ಸಲ್ಲಿಸಬಹುದಾಗಿದೆ. ದೇವಾಲಯದಲ್ಲಿ ಕಾಣಿಕೆ ಹೊರತಾಗಿಯೂ ದೇವಿಗೆ ಸಲ್ಲಿಸುವ ಕುಂಕುಮಾರ್ಚನೆ, ಉಡಿ, ಪಂಚಾಮೃತ ಅಭಿಷೇಕ, ಮಹಾಪೂಜೆ, ಪಂಚರಸ ಅಭಿಷೇಕ ಹಾಗು ಪುಷ್ಪಾಲಂಕಾರ ಪೂಜೆಯ ಸೇವೆಯ ಪಾವತಿಯನ್ನು ಕೂಡಾ ಇ-ಸೇವೆ ಮೂಲಕ ಪಾವತಿಸಬಹುದಾಗಿದೆ. ದೇವಾಲಯದಲ್ಲಿ ಕ್ಯೂಆರ್ ಕೋಡ್​ ವ್ಯವಸ್ಥೆಯಿಂದಾಗಿ ಕಳೆದ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಇ-ಹುಂಡಿಗೆ 75 ಸಾವಿರ ಕಾಣಿಕೆ ಹಾಗೂ ಇ-ಸೇವೆಗೆ 28 ಸಾವಿರ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಪಾರದರ್ಶಕ ವ್ಯವಹಾರಕ್ಕೆ ಸೂಕ್ತ : ಡಿಜಿಟಲ್ ವ್ಯವಸ್ಥೆಯನ್ನು ದೇವಾಲಯಗಳಲ್ಲಿ ಬಳಸುವುದರಿಂದ ಭಕ್ತರು ದೇವರಿಗೆ ಸಲ್ಲಿಸುವ ಕಾಣಿಕೆಯಲ್ಲಿ ಮೋಸ ಇರುವುದಿಲ್ಲ. ಕಾಣಿಕೆ ನೇರವಾಗಿ ದೇವಾಲಯದ ಖಾತೆಗೆ ಜಮಾ ಆಗುತ್ತದೆ. ಇದರಿಂದ ದೇವಾಲಯದ ಆದಾಯ ಹೆಚ್ಚುತ್ತದೆ. ಕಾಣಿಕೆಯನ್ನು ಪ್ರತಿದಿನ ಎಣಿಸುವ ಅಗತ್ಯವೂ ಇಲ್ಲ. ಅಲ್ಲದೇ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣಗಳಿಗೂ ತಡೆ ಬೀಳಲಿದ್ದು, ಮಾರಿಕಾಂಬಾ ದೇವಸ್ಥಾನದಲ್ಲಿಯೇ ಯಶಸ್ವಿಯಾದ ಕಾರಣ ಸಣ್ಣ ಪುಟ್ಟ ದೇವಾಲಯಗಳಲ್ಲೂ ಸಹ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಶೌಚಾಲಯ ಅವ್ಯವಸ್ಥೆ : ಪಾಳು ಬಿದ್ದ ಶಿರಸಿ ಮಾರಿಕಾಂಬಾ ಯಾತ್ರಿ ನಿವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.