ಕಾರವಾರ (ಉತ್ತರ ಕನ್ನಡ): ಅಂಗಡಿಯೊಂದರ ಬಾಗಿಲು ಮುರಿದು 11 ಸಾವಿರ ನಗದು ದೋಚಿ ಪರಾರಿಯಾಗಿದ್ದ ಖದೀಮನನ್ನು ಬಂಧಿಸುವಲ್ಲಿ ಮುಂಡಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಡಗೋಡದ ಹೊಸ ಓಣಿಯ ಮಹಮ್ಮದ್ ಉಸ್ಮಾನ್ ಲೋಹಾರ (19) ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ಮುಂಡಗೋಡು ಟಿಬೆಟಿಯನ್ ಲಾಮಾ ಕ್ಯಾಂಪ್ ಬಳಿಯ ಮಂಜುನಾಥ ಶೇಟ್ ಎಂಬುವವರ ಅಂಗಡಿ ಬಾಗಿಲು ಮುರಿದು ಒಳನುಗ್ಗಿದ ಈತ, ತನ್ನ ಕೃತ್ಯ ಗೊತ್ತಾಗದಂತೆ ಸಿಸಿ ಕ್ಯಾಮೆರಾ ಒಡೆದು ಅಂಗಡಿಯಲ್ಲಿದ್ದ 11 ಸಾವಿರ ನಗದು ದೋಚಿ ಪರಾರಿಯಾಗಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮುಂಡಗೋಡು ಪೊಲೀಸರು, ಎರಡೇ ದಿನಗಳಲ್ಲಿ ಆರೋಪಿ ಬಂಧಿಸಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ನಾಲ್ವರ ಬಂಧನ, ಇಬ್ಬರು ಮಹಿಳೆಯರ ರಕ್ಷಣೆ