ಕಾರವಾರ : ಶಾಲಾ ಪ್ರಾರಂಭೋತ್ಸವದ ದಿನವೇ ಬ್ಯಾನರ್, ತಳಿರು-ತೋರಣಗಳಿಂದ ಶೃಂಗರಿಸಲಾಗಿದ್ದ ಶಾಲಾ ಪ್ರವೇಶದ್ವಾರದ ಬಳಿ ಹೆಬ್ಬಾವೊಂದು ಪ್ರತ್ಯಕ್ಷವಾದ ಘಟನೆ ದಾಂಡೇಲಿ ನಗರದ ಬಂಗೂರನಗರ ಸರ್ಕಾರಿ ಉರ್ದು, ಕನ್ನಡ ಹಾಗೂ ಮರಾಠಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬಂಗೂರನಗರ ಸರ್ಕಾರಿ ಶಾಲೆಯ ಪ್ರವೇಶ ದ್ವಾರದಲ್ಲಿ ಅಳವಡಿಸಿದ್ದ ನಾಮಫಲಕವಿರುವ ಎತ್ತರದ ಕಮಾನಿನ ಮೇಲೆ ಹೆಬ್ಬಾವೊಂದು ಪ್ರತ್ಯಕ್ಷವಾಗಿ ಜನರ ಗಮನ ಸೆಳೆದಿದೆ.
ಬಹಳ ಹೊತ್ತು ಹಾವಿರುವುದನ್ನು ಗಮನಿಸಿದ್ದ ಸಾರ್ವಜನಿಕರು ತಕ್ಷಣ ನಗರದ ಉರಗ ಪ್ರೇಮಿ ರಝಾಕ್ ಅವರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಬಂದ ರಝಾಕ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.