ETV Bharat / state

ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ: ಕರವೇ ಗಜಸೇನೆಯಿಂದ ಪ್ರತಿಭಟನೆ

ಸ್ಥಳಿಯ ನೋಂದಣಿ ಹೊಂದಿರುವ ವಾಹನ ಸವಾರಿಗೆ ಟೋಲ್ ವಿನಾಯಿತಿ ನೀಡುವಂತೆ ಆಗ್ರಹಿಸಿ ಕರವೇ ಗಜಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Protest by Karave Gajasena
ಕರವೇ ಗಜಸೇನೆಯಿಂದ ಪ್ರತಿಭಟನೆ
author img

By

Published : Aug 31, 2020, 7:35 PM IST

ಕಾರವಾರ: ಸ್ಥಳೀಯ ವಾಹನ ಸವಾರರಿಂದ ಸುಂಕ ವಸೂಲಾತಿ ಮಾಡುತ್ತಿರುವುದನ್ನು ವಿರೋಧಿಸಿ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ನಾಕಾ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸ್ಥಳಿಯ ನೋಂದಣಿ ಹೊಂದಿರುವ ವಾಹನ ಸವಾರಿಗೆ ಟೋಲ್ ವಿನಾಯಿತಿ ನೀಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ. ಈಗಾಗಲೇ ಸ್ಥಳೀಯ ನೋಂದಣಿ ಹೊಂದಿರುವ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗಿದೆಯಾದರೂ ಕೆಲ ವಾಹನಗಳಿಂದ ಆರ್ ಆರ್ ಬಿ ಕಂಪನಿ ಸುಂಕ ವಸೂಲಿ ಮಾಡುತ್ತಿದೆ. ಇದರಿಂದ ಅಧಿಕಾರಿಗಳ ಮಾತಿಗೆ ಆರ್ ಆರ್ ಬಿ ಕಂಪನಿ ಯಾವುದೇ ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಪೊಲೀಸ್​ ಹಾಗೂ ಪ್ರತಿಭಟನಾ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಬಂದ ತಹಶೀಲ್ದಾರರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಮುಂದಾದರಾದರೂ ವಿಫಲವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.