ETV Bharat / state

ಉತ್ತರಕನ್ನಡದಲ್ಲಿ ಅಬ್ಬರಿಸುತ್ತಿರುವ ಮಳೆ: ಗುಡ್ಡ ಕುಸಿತ.. ಮನೆ-ಜಮೀನುಗಳಿಗೆ ನುಗ್ಗುತ್ತಿರುವ ನೀರು

ಕಾರವಾರ ಜಿಲ್ಲೆಯಲ್ಲಿ ಮುಂದುವರಿದ ವರುಣಾರ್ಭಟ- ಭಟ್ಕಳದಲ್ಲಿ ಮನೆ ಗೋಡೆ ಬಿದ್ದು ಮಹಿಳೆಗೆ ಗಾಯ- ಮನೆ-ಜಮೀನುಗಳಿಗೆ ನುಗ್ಗುತ್ತಿರುವ ಮಳೆ ನೀರು

ರಸ್ತೆ ಮೇಲೆ ಗುಡ್ಡ ಕುಸಿತ
ರಸ್ತೆ ಮೇಲೆ ಗುಡ್ಡ ಕುಸಿತ
author img

By

Published : Jul 7, 2022, 5:43 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಇಂದೂ ಕೂಡ ಮುಂದುವರೆದಿದೆ. ಗಾಳಿ ಸಹಿತ ಭಾರಿ ಮಳೆಗೆ ಹೊನ್ನಾವರದಲ್ಲಿ ಗುಡ್ಡ ಕುಸಿದಿದ್ದು, ಕೆಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಭಾರಿ ಮಳೆಗೆ ರಸ್ತೆ ಮೇಲೆ ಗುಡ್ಡ ಕುಸಿತ

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಭಟ್ಕಳದಲ್ಲಿ ಮನೆ ಗೋಡೆ ಬಿದ್ದು ಮಹಿಳೆಯೋರ್ವರು ಗಾಯಗೊಂಡಿದ್ದಾರೆ. ಅಲ್ಲದೇ, ಹೊನ್ನಾವರದಲ್ಲಿ ತೆಂಗಿನ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಕುಮಟಾದಲ್ಲಿಯೂ ಮನೆ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮನೆ ಮೇಲೆ ಮರ ಬಿದ್ದು ಅನಾಹುತವಾಗಿರುವುದು
ಮನೆ ಮೇಲೆ ಮರ ಬಿದ್ದು ಅನಾಹುತ

ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಶರಾವತಿ, ಗಂಗಾವಳಿ, ಅಘನಾಶಿನಿ, ವರದಾ, ಕಾಳಿ ನದಿಗಳು ತುಂಬಿ ಹರಿಯಲಾರಂಭಿಸಿದ್ದು, ನದಿ ತೀರದ ಜನರಿಗೆ ಪ್ರವಾಹದ ಭೀತಿ ಶುರುವಾಗಿದೆ. ಶರಾವತಿ ನದಿ ತೀರದ ಗುಂಡಬಾಳ ಭಾಗದಲ್ಲಿ ತೋಟ, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈಗಾಗಲೇ ನದಿ ಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ‌.

ಜಮೀನುಗಳಿಗೆ ನೀರು ನುಗ್ಗಿ ಅನಾಹುತವಾಗಿರುವುದು
ಜಮೀನುಗಳಿಗೆ ನೀರು ನುಗ್ಗಿರುವುದು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ: ಭಾರಿ ಮಳೆಯಿಂದಾಗಿ ಹೊನ್ನಾವರದ ಹೊಸಾಕುಳಿ ಪಂಚಾಯತ್ ವ್ಯಾಪ್ತಿಯ ಗುಡ್ಡೆಬಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಗಿದೆ. ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದ್ದು, ಗ್ರಾಮ ಪಂಚಾಯತ್ ವತಿಯಿಂದ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಓದಿ: ಕಬಿನಿ ಪ್ರವಾಹ: ಜಾಗ್ರತರಾಗಿರುವಂತೆ ಸಾರ್ವಜನಿಕರಿಗೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.