ETV Bharat / state

ಐಸಿಸ್ ಜೊತೆ ನಂಟು ಶಂಕೆ: ಎನ್ಐಎ ತಂಡದಿಂದ ಭಟ್ಕಳದ ಜುಫ್ರಿ ಜವ್ಹಾರ್​ ದಾಮುದಿ ಬಂಧನ - ಭಟ್ಕಳ ಎರಡು ಮನೆ ಮೇಲೆ ಎನ್​ಐಎ ದಾಳಿ

ಭಯೋತ್ಪಾದನೆ ಆರೋಪದಡಿಯಲ್ಲಿ ಭಟ್ಕಳ ತಾಲೂಕಿನ ಸಾಗರ ರಸ್ತೆಯಲ್ಲಿನ ಎರಡು ಮನೆಗಳ ಮೇಲೆ ಕೇಂದ್ರ ಎನ್​ಐಎ ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

nia-team-raid-on-two-house-at-bhatkal
ಎನ್ಐಎ ದಾಳಿ
author img

By

Published : Aug 6, 2021, 4:10 PM IST

Updated : Aug 6, 2021, 5:54 PM IST

ಭಟ್ಕಳ: ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ, ಕೇಂದ್ರ ಎನ್ಐಎ ತಂಡದಿಂದ ಭಯೋತ್ಪಾದನೆ ಆರೋಪದಡಿ ತಾಲೂಕಿನ ಎರಡು ಮನೆಗಳ ಮೇಲೆ ಇಂದು ಏಕಕಾಲಕ್ಕೆ ದಾಳಿ ನಡೆಸಲಾಯಿತು.

ತಾಲೂಕಿನ ಸಾಗರ ರಸ್ತೆ ಹಾಗೂ ಉಮರ್ ಸ್ಟ್ರೀಟ್​​ನಲ್ಲಿರುವ ಎರಡು ಮನೆಗಳ ಮೇಲೆ ಎನ್​ಐಎ ದಂಡ ದಾಳಿ ನಡೆಸಿತು. ಈ ಹಿಂದೆ ಬಂಧನಕ್ಕೊಳಕ್ಕಾಗಿದ್ದ ಭಯೋತ್ಪಾದಕ ಓರ್ವನ ಸಂಬಂಧಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ಎನ್‌ಐಎ ತಂಡ ದಾಳಿ ನಡೆಸಿದೆ. ಪರಿಶೀಲನೆ ಮುಂದುವರೆಸಿರುವ ತಂಡ ಜುಫ್ರಿ ಜವ್ಹಾರ್​ ದಾಮುದಿ ಎಂಬುವನನ್ನು ಬಂಧಿಸಿದೆ.

ಈ ವಿಚಾರಕ್ಕಾಗಿ ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದರು. ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕೆ ದಾಳಿ ಕುರಿತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ. ದಾಳಿ ವೇಳೆ ತಾಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್​​ ಮಾಡಲಾಗಿತ್ತು.

Last Updated : Aug 6, 2021, 5:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.