ETV Bharat / state

ನಾಗಬನ ಕಾಂಪೌಂಡ್​ ನಿರ್ಮಾಣ ವಿವಾದ: ಸಭೆಯಿಂದ ಹೊರನಡೆದ ಮುಖಂಡರು - Bhatkal

ನಾಗಬನದ ಕಾಂಪೌಂಡ್​ ಕೆಲಸ ಪ್ರಾರಂಭಿಸಿದ್ದು, ಇದಕ್ಕೆ ಅನ್ಯಕೋಮಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ತಕರಾರು ತೆಗೆದಿದ್ದಾರೆ.

Bhatkal
ನಾಗಬನ ಕಾಂಪೌಂಡ್​ ನಿರ್ಮಾಣ ವಿವಾದ: ಸಭೆಯಿಂದ ಹೊರನಡೆದ ಮುಖಂಡರು
author img

By

Published : Apr 17, 2021, 12:14 PM IST

ಭಟ್ಕಳ: ತಾಲೂಕಿನ ಹಳೆ ಬಸ್ ನಿಲ್ದಾಣದ ಸಮೀಪ ನಾಗಬನದ ಗುದ್ದಲಿ ಪೂಜೆಯನ್ನು ಕಳೆದ ಮಂಗಳವಾರ ಶಾಸಕ ಸುನೀಲ್​ ನಾಯ್ಕ ನೆರವೇರಿಸಿದ್ದರು. ನಾಗಬನ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಪ್ರಾರಂಭಿಸಿದ ಕಾರಣ ಅನ್ಯಕೋಮಿನ 50-100 ಮಂದಿ ಕಾರ್ಯಕ್ಕೆ ಅಡ್ಡಿ ಪಡಿಸಿದ್ದು, ಅಂತಿಮವಾಗಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ ಸಭೆಯೂ ತಾರ್ಕಿಕ ಅಂತ್ಯ ಕಾಣದೇ ಅನ್ಯಕೋಮಿನ ಮುಖಂಡರು ಸಭೆಯಿಂದ ಹೊರ ನಡೆದಿದ್ದಾರೆ.

ನಾಗಬನದ ದೇವಾಸ್ಥಾನದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಸುನೀಲ್ ನಾಯ್ಕ ಮಂಗಳವಾರದಂದು ಗುದ್ದಲಿ ಪೂಜೆ ನೆರವೇರಿಸಿದ್ದರು. ಅದರಂತೆ ನಾಗಬನದ ಕಾಂಪೌಂಡ್​ ಕೆಲಸ ಪ್ರಾರಂಭಿಸಿದ್ದು, ಇದಕ್ಕೆ ಅನ್ಯಕೋಮಿನ ಜನರು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದು ಕೆಲಸ ನಿಲ್ಲಿಸುವಂತೆ ತಕರಾರು ತೆಗೆದಿದ್ದಾರೆ.

ಕಾಂಪೌಂಡ್ ಕಟ್ಟುವುದು ಬೇಡ. ಜಾಗದ ವಿಷಯದ ಬಗ್ಗೆ ಇರುವ ಸಮಸ್ಯೆಗಳನ್ನು ಕಾನೂನು ಮೂಲಕ ಪರಿಹರಿಸಿದ ನಂತರ ಕಟ್ಟಿಕೊಳ್ಳಿ. ಈಗ ಕಾಂಪೌಂಡ್ ಕಟ್ಟಲು ಯಾಕೆ ಅನುಮತಿಯ ಮೇಲೆ ಕೊಟ್ಟಿದ್ದೀರಿ?. ಸದ್ಯಕ್ಕೆ ಕೆಲಸ ನಿಲ್ಲಿಸಿ ಎಂದು ಕೆಲಸಗಾರರಿಗೆ ಮತ್ತು ಕರ್ತವ್ಯದಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಪರಿಸ್ಥಿತಿ ಅರಿತು ಸ್ಥಳಕ್ಕೆ ಜಮಾಯಿಸಿದ ಪೊಲೀಸರು ಕಾಂಪೌಂಡ್​ ಕಟ್ಟುತ್ತಿರುವ ಕೆಲಸಗಾರರಿಗೆ ಕೆಲಸ ನಿಲ್ಲಿಸಲು ಹೇಳಿದ್ದು, ಚರ್ಚೆಯ ಬಳಿಕ ಕೆಲಸವನ್ನು ಮುಂದುವರಿಸಲು ತಿಳಿಸಿದ್ದಾರೆ.

ನಾಗಬನ ಕಾಂಪೌಂಡ್​ ನಿರ್ಮಾಣ ವಿವಾದ: ಸಭೆಯಿಂದ ಹೊರನಡೆದ ಮುಖಂಡರು

ಬಳಿಕ ಸ್ಥಳಕ್ಕೆ ತಹಶೀಲ್ದಾರರು ಬರಬೇಕೆಂದು ನಾಗಬನ ಪರವಾದ ಜನರು ತಾಕೀತು ಮಾಡಿದ್ದು, ಕೆಲ ಗಂಟೆಗಳ ಬಳಿಕ ತಹಶೀಲ್ದಾರರು ಸ್ಥಳಕ್ಕೆ ಆಗಮಿಸಿದರು. ಇದರ ಬೆನ್ನಲೇ ಸ್ಥಳಕ್ಕೆ ಶಾಸಕ ಸುನೀಲ ನಾಯ್ಕ ದಾಖಲೆ ಸಮೇತ ಭೇಟಿ ನೀಡಿ ಆರ್​ಟಿಸಿಯಲ್ಲಿ ನಾಗಬನಕ್ಕೆ ಕಾಯ್ದಿಟ್ಟ ಸ್ಥಳ ಇದ್ದು. ಈ ವಿಷಯದಲ್ಲಿ ಯಾಕೆ ತೊಂದರೆ ಕೊಡುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ಬಗ್ಗೆ ಡಿವೈಎಸ್​ಪಿ ಬೆಳ್ಳಿಯಪ್ಪ ಕಾಂಪೌಂಡ್​ ಕಟ್ಟಲು ವಿರೋಧ ತೆಗೆದ ಗುಂಪಿನವರು ಸಹಾಯಕ ಆಯುಕ್ತರ ಬಳಿ ತೆರಳಿದ್ದು, ನೀವು ಕೂಡ ಅಲ್ಲಿಗೆ ತೆರಳಿ ಸಭೆಯ ಮೂಲಕ ತೀರ್ಮಾನ ತೆಗೆದುಕೊಳ್ಳುವಂತೆ ಶಾಸಕರಿಗೆ ತಿಳಿಸಿದರು.

ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ:

ನೇರವಾಗಿ ಶಾಸಕರು ಹಾಗೂ ನಾಗಬನ ಪರವಾಗಿರುವ ಮುಖಂಡರು ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಅನ್ಯಕೋಮಿನ ಮುಖಂಡರನ್ನೊಳಗೊಂಡಂತೆ ಸಭೆ ನಡೆಸಲಾಯಿತು. ಸಭೆಯಲ್ಲಿ ನಾಗಬನದ ಪರವಾಗಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಧಾರ್ಮಿಕ ಸ್ಥಳಕ್ಕೆ ಸರ್ಕಾರದಿಂದ ಕಾಯ್ದಿಟ್ಟ ಜಾಗದಲ್ಲಿ ಕಾಂಪೌಂಡ್​ ಕಟ್ಟಲು ತಕರಾರು ಯಾಕೆ?. ಭಟ್ಕಳದಲ್ಲಿ ಸಾಕಷ್ಟು ಕಡೆ ಮಸೀದಿ, ಮನೆಗಳನ್ನು ಯಾವುದೇ ಪರವಾನಗಿ ಇಲ್ಲದೆ. ಇದಕ್ಕೆ ನಮ್ಮ ತಕರಾರು ಇಲ್ಲ. ಈಗಾಗಲೇ 7.50 ಲಕ್ಷ ರೂ. ಹಣ ಮಂಜೂರಾಗಿದ್ದು, ಅದರಲ್ಲಿ 2 ಲಕ್ಷ ರೂ. ಕಾಂಪೌಂಡ್​ ನಿರ್ಮಾಣ ಮಾಡಬೇಕಾಗಿದೆ ಎಂದರು.

ಇದಕ್ಕೆ ಅನ್ಯಕೋಮಿನ ಮುಖಂಡರು ನಾಗಬನ ಜಾಗವೂ ಯಾವೊಬ್ಬ ವ್ಯಕ್ತಿಯ ಹಕ್ಕಾಗಿಲ್ಲ. ಇಂತಹ ಸಂದರ್ಭದಲ್ಲಿ ಕಾಂಪೌಂಡ್​ ಕಟ್ಟಲು ಅವಕಾಶವಿಲ್ಲ. ಇದೊಂದು ವಿವಾದಿತ ಸ್ಥಳವಾಗಿದ್ದು ಅನ್ಯಕೋಮಿನ ಮುಖಂಡರನ್ನು ಕರೆದು ಸಭೆ ನಡೆಸಿ ಕಾಂಪೌಂಡ್​ ಕಟ್ಟಬೇಕೆಂದು ಸಭೆಗೆ ತಿಳಿಸಿದರು. ಇದಕ್ಕೆ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಸಿಟ್ಟಿಗೆದ್ದು ನಮ್ಮ ಜಾಗದಲ್ಲಿ ನಾವು ಕಾಂಪೌಂಡ್​ ಕಟ್ಟಲು ಯಾರ ಒಪ್ಪಿಗೆ ಬೇಕು?. ನಾವೇನು ಬೇರೆ ದೇಶದಲ್ಲಿದ್ದೇವೆಯಾ ಎಂದು ಪ್ರಶ್ನಿಸಿದ್ದಕ್ಕೆ ಅನ್ಯಕೋಮಿನ ಜನರು ಸಭೆಯನ್ನು ತಿರಸ್ಕರಿಸಿ ಸಭೆಯಿಂದ ಹೊರನಡೆದರು.

ಒಟ್ಟಿನಲ್ಲಿ ಮಾತುಕತೆಯಿಂದ ಒಂದು ತಾರ್ಕಿಕ ಅಂತ್ಯ ಕಾಣಬೇಕಾಗಿದ್ದ ಸಭೆಯು ಗದ್ದಲ ಗಲಾಟೆಯಲ್ಲಿ ಅಂತ್ಯಗೊಂಡಿತು. ಈ ವೇಳೆ, ತಹಶೀಲ್ದಾರ್​ ರವಿಚಂದ್ರ ಎಸ್. ಡಿವೈಎಸ್​ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.