ETV Bharat / state

ನಿಷೇಧಾಜ್ಞೆ ನಡುವೆಯೂ ಮೀನು ಮಾರಾಟ: ಮಾರುಕಟ್ಟೆ ಬಂದ್ ​ಮಾಡಿಸಿದ ಪೊಲೀಸರು - coronavirus news

ಕೊರೊನಾ ಭೀತಿ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಕುಮಟಾ ಮಾರುಕಟ್ಟೆಯಲ್ಲಿ ನೂರಾರು ಮಹಿಳೆಯರು ಮೀನು ಮಾರಾಟಕ್ಕೆ ಮುಂದಾಗಿದ್ದರು. ಹೀಗಾಗಿ ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡ ಪೊಲೀಸರು ಮಾರುಕಟ್ಟೆಯನ್ನು ಬಂದ್​ ಮಾಡಿಸಿದ್ದಾರೆ.

Fish sales by women in between prohibition
ನಿಷೇಧಾಜ್ಞೆ ನಡುವೆಯೂ ಮಹಿಳೆಯರಿಂದ ಮೀನು ಮಾರಾಟ
author img

By

Published : Mar 24, 2020, 7:25 PM IST

ಕಾರವಾರ: ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಇದ್ದರೂ ಮೀನು ಮಾರಾಟಕ್ಕೆ ಮುಂದಾಗಿದ್ದ ಮಹಿಳೆಯರನ್ನು ಚದುರಿಸಿದ ಪೊಲೀಸರು ಮಾರುಕಟ್ಟೆ ಬಂದ್ ಮಾಡಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.

ಅಗತ್ಯ ವಸ್ತುಗಳನ್ನು ಬಿಟ್ಟು ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಇಷ್ಟಾದರೂ ನಿಯಮ ಉಲ್ಲಂಘಿಸಿ ಕುಮಟಾ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಬಂದಿದ್ದ ನೂರಾರು ಮಹಿಳೆಯರನ್ನು ತರಾಟೆ ತೆಗೆದುಕೊಂಡ ಪೊಲೀಸರು ಮಾರುಕಟ್ಟೆ ಬಂದ್ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

ನಿಷೇಧಾಜ್ಞೆ ನಡುವೆಯೂ ಮಹಿಳೆಯರಿಂದ ಮೀನು ಮಾರಾಟ... ಮಾರುಕಟ್ಟೆ ಬಂದ್​ ಮಾಡಿಸಿದ ಪೊಲೀಸರು

ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಯಾರು ಮನೆಯಿಂದ ಹೊರಬರದಂತೆ ಈಗಾಗಲೇ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ವ್ಯಾಪಾರ ಸಂಪೂರ್ಣ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.