ETV Bharat / state

ಚಾಲಕನ ನಿಯಂತ್ರಣ ತಪ್ಪಿದ ಮೀನು ಲಾರಿ ಪಲ್ಟಿ ; ಚೆಲ್ಲಾಪಿಲ್ಲಿಯಾದ ಮೀನು

ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳವಾಗಿ ಬಾಳೆಗದ್ದೆ ಮತ್ತು ಹುಲಿಯಪ್ಪನ ಕಟ್ಟೆ ನಡುವಿನ ತಿರುವು ಗುರುತಿಸಲ್ಪಟ್ಟಿದೆ..

fish loaded lorry accident in karwar
ಮೀನು ಲಾರಿ ಅಪಘಾತ
author img

By

Published : Jun 8, 2021, 5:13 PM IST

ಕಾರವಾರ : ಮೀನು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಲಕ್ಷಾಂತರ ಮೌಲ್ಯದ ಮೀನು ಮಣ್ಣುಪಾಲಾದ ಘಟನೆ ಹೊನ್ನಾವರ ತಾಲೂಕಿನ ಮುಗ್ವಾ ಬಾಳೆಗದ್ದೆ ತಿರುವಿನಲ್ಲಿ ನಡೆದಿದೆ.

fish loaded lorry accident in karwar
ಮೀನು ಲಾರಿ ಪಲ್ಟಿ

ಹೊನ್ನಾವರದಿಂದ ಸಾಗರ ಕಡೆ ತೆರಳುತ್ತಿದ್ದ ಮೀನು ತುಂಬಿದ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ಆದರೆ, ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನು ಚೆಲ್ಲಾಪಿಲ್ಲಿಯಾಗಿದೆ. ಬಳಿಕ ಬೇರೆ ಲಾರಿಯಲ್ಲಿ ಉಳಿದ ಮೀನನ್ನು ತುಂಬಿಕೊಂಡು ಲಾರಿಯನ್ನು ಹೆದ್ದಾರಿ ಮೇಲಿಂದ ತೆರವುಗೊಳಿಸಲಾಗಿದೆ.

fish loaded lorry accident in karwar
ಮೀನು ಚೆಲ್ಲಾಪಿಲ್ಲಿ

ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳವಾಗಿ ಬಾಳೆಗದ್ದೆ ಮತ್ತು ಹುಲಿಯಪ್ಪನ ಕಟ್ಟೆ ನಡುವಿನ ತಿರುವು ಗುರುತಿಸಲ್ಪಟ್ಟಿದೆ.

ಹೆಚ್ಚಾಗಿ ಗೇರಸೊಪ್ಪ ಮಾರ್ಗವಾಗಿ ಹೊನ್ನಾವರ ಕಡೆಗೆ ವಾಹನಗಳೇ ಅಪಘಾತಕ್ಕೀಡಾಗುತ್ತಿವೆ. ಹೆದ್ದಾರಿ ಪ್ರಾಧಿಕಾರದವರು ಸೂಚನಾ ಫಲಕಗಳನ್ನು ಅಳವಡಿಸಿದ್ದರೂ ಲಕ್ಷ್ಯವಹಿಸದ ಚಾಲಕರು ಅತೀ ವೇಗವಾಗಿ ಬಂದು ತಿರುವಿನಲ್ಲಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಅಪಘಾತಗೊಳಾಗುತ್ತಿವೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.