ಭಟ್ಕಳ: ತಾಲೂಕಿನ ಹಳೇ ಕುಬೇರ ಹೋಟೆಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನ ಮೃತದೇಹ ಪತ್ತೆಯಾಗಿದೆ.
ನಾಗರಾಜ್ ಮೃತ ಕೆಎಸ್ಆರ್ಟಿಸಿ ಚಾಲಕ, ಇವರು ಹನುಮಂತಪುರ ಹಾಸನ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಗುರುತಿನ ಚೀಟಿಯಲ್ಲಿ ಹಾಸನ ಮೂಲದ ಕೆ.ಎಸ್.ಆರ್.ಟಿ.ಸಿ ಚಾಲಕ ಎಂಬ ವಿಳಾಸ ಇದೆ.
![ID card of death person](https://etvbharatimages.akamaized.net/etvbharat/prod-images/kn-bkl-01-a-persons-corpse-has-been-found-kac-10002_13102020150459_1310f_1602581699_381.jpg)
ಆದರೆ ಇವರು ಹಾಸನದಿಂದ ಭಟ್ಕಳಕ್ಕೆ ಯಾವ ಉದೇಶಕ್ಕಾಗಿ ಬಂದಿದ್ದರು, ಬಳಿಕ ಏನಾಗಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.