ಕಾರವಾರ: ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಸುಮಾರು 40 ಎಕರೆಗೂ ಹೆಚ್ಚಿನ ಬೆಳೆ ಸುಟ್ಟು ಕರಕಲಾಗಿರುವ ಘಟನೆ ಹಳಿಯಾಳ ತಾಲೂಕಿನ ಅಡ್ಡಿಗೆರಾ ಗ್ರಾಮದಲ್ಲಿ ನಡೆದಿದೆ.
ಅಡ್ಡಿಗೆರಾ ಗ್ರಾಮದ ರಾಮು ಬಿಚ್ಚುಗಲಿ ಎಂಬ ರೈತನ ಕಬ್ಬಿನ ಗದ್ದೆ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹೊತ್ತಿಕೊಂಡ ಬೆಂಕಿ ಕಿಡಿ ಗಾಳಿ ರಭಸಕ್ಕೆ ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ಹಬ್ಬಿದೆ.
ಪರಿಣಾಮ ಪಕ್ಕದಲ್ಲಿಯೇ ಇದ್ದ ವಿಠ್ಠು ಯಮ್ಮು ಬಿಚ್ಚುಗಲಿ, ಧೂಳು ಬಿಚ್ಚುಗಲಿ ಎಂಬ ರೈತರ ಕಬ್ಬಿನ ಗದ್ದೆಗೂ ತಗುಲಿ ಲಕ್ಷಾಂತರ ರೂಪಾಯಿ ವೆಚ್ಚದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಇನ್ನು ಬೆಳೆಗೆ ಬೆಂಕಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಆದರೆ, ಕಬ್ಬಿನ ಗದ್ದೆಯ ಬಹುಭಾಗ ಸುಟ್ಟು ಕರಕಲಾಗಿದ್ದು, ಪರಿಹಾರಕ್ಕಾಗಿ ರೈತರು ಆಗ್ರಹಿಸಿದ್ದಾರೆ. ಈ ಬಗ್ಗೆ ಭಾಗವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಭೀಕರ ರಸ್ತೆ ಅಪಘಾತ : ಆಟೋಗೆ ಟ್ರ್ಯಾಕ್ಟರ್ ಡಿಕ್ಕಿ, ಮೂವರು ಸಾವು