ETV Bharat / state

ಭಟ್ಕಳದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಾಪತ್ತೆ, ದೂರು ದಾಖಲು - ಭಟ್ಕಳದಲ್ಲಿ 16 ವರ್ಷದ ಬಾಲಕಿ ಕಾಣೆ

ಮನೆಯಿಂದ ಹೊರಹೋಗಿದ್ದ ಬಾಲಕಿಯೋರ್ವಳು ಕಾಣೆಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

16-year-old girl goes missing in bhatkal

author img

By

Published : Oct 31, 2020, 12:21 AM IST

ಭಟ್ಕಳ: ಪುಸ್ತಕ ತರುತ್ತೇನೆಂದು ಹೇಳಿ ಮನೆಯಿಂದ ಹೊರಹೋಗಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ, ಮನೆಗೂ ಮರಳದೆ ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾಳೆ. ಅವಳನ್ನು ಅಪಹರಣ ಮಾಡಿರುವ ಸಾಧ್ಯತೆ ಇದೆ ಎಂದು ಪೋಷಕರು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಭಟ್ಕಳದ ಹನೀಪಾಬಾದ 4ನೇ ಕ್ರಾಸ್‍ನ ನಿವಾಸಿಯಾಗಿರುವ ಜಿಕ್ರ ಖಾದಿರ್ ಬಾಷಾ ಜುಸಿದ್ಧಿ (16) ನಾಪತ್ತೆಯಾಗಿರುವ ವಿದ್ಯಾರ್ಥಿನಿ. ಇವಳು ಗುರುವಾರ ಸಂಜೆ ಪುಸ್ತಕ ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದಳು. ಬಳಿಕ ಮನೆಗೂ ಮರಳಿಲ್ಲ. ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾಳೆ. ಅಥವಾ ಯಾರೋ ಅಪಹರಣ ಮಾಡಿರಬಹುದು ಎಂದು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಬಾಲಕಿಯ ತಂದೆ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬಾಲಕಿ ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.