ETV Bharat / state

ಉಡುಪಿ: ನೀರಿನಿಂದ ಟೇಕಾಫ್ ಆಗುವ ಸೀಪ್ಲೇನ್ ನಿರ್ಮಿಸಿದ ಯುವಕರು...15 ವರ್ಷದ ಪರಿಶ್ರಮಕ್ಕೆ ಸಂದ ಜಯ

author img

By

Published : Feb 26, 2021, 9:36 PM IST

ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ತೂಕ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀಪ್ಲೇನ್​​​​​ ಯಶಸ್ವಿಯಾಗಿ ಹಾರಾಟ ನಡೆಸಿದೆ.

Young men who built a seaplane that would take off from the water
ನೀರಿನಿಂದ ಟೇಕಾಫ್ ಆಗುವ ಸೀಪ್ಲೇನ್ ನಿರ್ಮಿಸಿದ ಯುವಕರು

ಉಡುಪಿ: ಇತ್ತೀಚೆಗೆ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತದ ಚರ್ಚೆ ಜೋರಾಗಿದೆ. ಇದೇ ಕಲ್ಪನೆಯಲ್ಲಿ ಉಡುಪಿಯ ಯುವಕರು ಸೀಪ್ಲೇನ್ ಸಿದ್ಧ ಮಾಡಿದ್ದಾರೆ. ಒಬ್ಬ ವ್ಯಕ್ತಿ ಕುಳಿತು ನೀರಲ್ಲಿ ತೇಲುವ, ಬಾನಲ್ಲಿ ಹಾರುವ ಮೈಕ್ರೋಲೈಟ್ ಸೀಪ್ಲೇನ್​​​​​ ಯಶಸ್ವಿ ಹಾರಾಟ ಕೂಡ ನಡೆದಿದ್ದು, ರಾಜ್ಯ, ಕೇಂದ್ರ ಸರ್ಕಾರದ ಸಹಾಯಕ್ಕೆ ಉತ್ಸಾಹಿ 8 ಯುವಕರು ಕಾಯುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್​​ನಲ್ಲಿ ಭಾರತದ ಮೊದಲ ಸೀಪ್ಲೇನ್​​​​​ ಉದ್ಘಾಟಿಸಿದ್ದರು. ವಿದೇಶದಿಂದ ಖರೀದಿಸಿದ ವಿಮಾನ ನರ್ಮದಾ ನದಿಯಲ್ಲಿ ಯಶಸ್ವಿಯಾಗಿ ಹಾರಾಟ ಮಾಡಿತ್ತು. ಇದೀಗ ಇದೇ ಮಾದರಿಯ ಪ್ಲೇನ್ ಉಡುಪಿಯ ಹೆಜಮಾಡಿ ಶಾಂಭವಿ ನದಿಯಲ್ಲೂ ಮೈಕ್ರೋಲೈಟ್ ಸೀಪ್ಲೇನ್​​​​​ ಯಶಸ್ವಿಯಾಗಿ ಹಾರಾಟ ನಡೆಸಿದೆ.

ಹೆಜಮಾಡಿ ನಡಿಕುದ್ರು ನಿವಾಸಿ ಪುಷ್ಪರಾಜ್ ಅಮೀನ್ ಈ ಅನ್ವೇಷಣೆಯ ಮಾಸ್ಟರ್ ಮೈಂಡ್. ಏರ್ ಮಾಡೆಲಿಂಗ್, ಎನ್​​​ಸಿಸಿ ಇನ್​ಸ್ಟ್ರಕ್ಟರ್ ಆಗಿರುವ ಪುಷ್ಪರಾಜ್ 15 ವರ್ಷಗಳ ಕಾಲ ಪರಿಶ್ರಮ ಪಟ್ಟು ಮೈಕ್ರೋಲೈಟ್ ಸೀಪ್ಲೇನ್ ಸಿದ್ಧಪಡಿಸಿದ್ದಾರೆ. ಏರೋನಾಟಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನೊಳಗೊಂಡ ಧೃತಿ ಎಂಬ ಸಂಸ್ಥೆ ಹೆಸರಿನಡಿಯಲ್ಲಿ ನದಿಯಲ್ಲಿ ತೇಲುತ್ತಾ ಹೋಗಿ, ಆಗಸದಲ್ಲಿ ಹಾರುವ ವಿಮಾನ ರೆಡಿ ಮಾಡಿದ್ದಾರೆ. ಸದ್ಯ ಪೈಲೆಟ್ ಮಾತ್ರ ಕುಳಿತು ಹಾರುವ ವಿಮಾನ ರೆಡಿಯಾಗಿದ್ದು, ಏರೋನಾಟಿಕಲ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಕ್ಲಾಸ್ ಕೊಡುವ ಜೊತೆ ಜೊತೆಗೆ ಮುಂದೆ 7 ಜನ ಕುಳಿತು ಹಾರುವ ಸಾಮರ್ಥ್ಯದ ವಿಮಾನ ತಯಾರಿಸುವ ಕನಸು ಹೊಂದಿದ್ದಾರೆ.

ರಿಮೋಟ್ ಕಂಟ್ರೋಲ್ ವಿಮಾನ, ಏರೋನಾಟಿಕಲ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಮಾಡಿಕೊಡುವ ಪುಷ್ಪರಾಜ್ 190 ಕೆಜಿ ತೂಕ ಹೊತ್ತೊಯ್ಯುವ ವಿಮಾನ ತಯಾರಿಸಿದ್ದಾರೆ. ಏರ್ ಕ್ರಾಫ್ಟ್ ಗ್ರೇಡ್ ಅಲ್ಯೂಮಿನಿಯಂ, ಸ್ಟೀಲ್​ನಿಂದ ಗಟ್ಟಿಯಾಗಿರುವ ಸ್ಪೆಷಲ್ ನೈಲಾನ್ ಬ್ರೈಡೆಡ್ ರೋಪ್, ನೈಲಾನ್ ಫ್ಯಾಬ್ರಿಕ್ ಕ್ಲಾತ್​​, 33 ಎಚ್​​​​.ಪಿ ಪವರ್ ಇರುವ 200 ಸಿಸಿ ಸಿಮೊನಿನಿ ಇಟಾಲಿಯನ್ ಎಂಜಿನ್, 53 ಇಂಚ್​​ನ ಮರದ ಪ್ರೊಫೆಲ್ಲರ್ ಬಳಸಿ ವಿಮಾನ ತಯಾರಿಸಿದ್ದಾರೆ. ಸ್ಪೀಡ್ ಪೆಟ್ರೋಲ್ ಬಳಸಿ ನದಿಯಲ್ಲಿ ಈ ವಿಮಾನ ವೇಗವಾಗಿ ಚಲಿಸಿ ಆಗಸಕ್ಕೆ ಹಾರುತ್ತದೆ.

ಈ ವಿಮಾನ ನಿರ್ಮಾಣಕ್ಕೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗಿದೆ. ಮನೆಯ ತೋಟದಲ್ಲೇ ವಿದ್ಯಾರ್ಥಿಗಳ ಜೊತೆಗೂಡಿ ಮೈಕ್ರೋ ಲೈಟ್ ಸೀಪ್ಲೇನ್​ ರೆಡಿಯಾಗಿದೆ. ಗೆಳೆಯರ ಸಂಬಂಧಿಕರೇ ಸಹಾಯಧನ ನೀಡಿ ಈ ವೆಚ್ಚ ಭರಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ನಡಿಕುದ್ರುವಿನಲ್ಲಿ ಒಂದು ವರ್ಕ್ ಶಾಪ್ ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರ ಈ ಶೋಧನೆಗೆ, ಯುವಕರ ತಂಡದ ಸಾಧನೆಗೆ ಬೆನ್ನೆಲುವಾಗಿ ನಿಲ್ಲಬೇಕು. ಅನ್ವೇಷಣೆಗೆ ಬೇಕಾದ ಕೆಲ ಯಂತ್ರಗಳಿಗೆ ಸಹಾಯಧನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಜನತೆಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.