ETV Bharat / state

ಪೇಜಾವರ ‌ಶ್ರೀಗಳ‌ ಆರೋಗ್ಯ ಸ್ಥಿತಿ ಚಿಂತಾಜನಕ: ಶ್ರೀಗಳ‌ ಭೇಟಿಗೆ ಇಂದಿನಿಂದ ನಿರ್ಬಂಧ

ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಭೇಟಿಗೆ ಇಂದಿನಿಂದ ನಿರ್ಬಂಧ ವಿಧಿಸಲಾಗಿದೆ.

pejavara-shree-health-serious
ಶ್ರೀಗಳ‌ ಭೇಟಿಗೆ ಇಂದಿನಿಂದ ನಿರ್ಬಂಧ
author img

By

Published : Dec 28, 2019, 10:37 AM IST

ಉಡುಪಿ: ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಭೇಟಿಗೆ ಇಂದಿನಿಂದ ನಿರ್ಬಂಧ ವಿಧಿಸಲಾಗಿದೆ.

ಗಣ್ಯರ ಭೇಟಿ ಹೆಚ್ಚಾದ ಹಿನ್ನೆಲೆ ಚಿಕಿತ್ಸೆಗೆ ಅಡ್ಡಿ‌ಯಾಗುತ್ತಿದೆ. ಯಾರ ಭೇಟಿಗೂ ಅವಕಾಶವಿಲ್ಲ ಎಂದು ಕೆಎಂಸಿ‌ ಆಸ್ಪತ್ರೆ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.

ಶ್ರೀಗಳ ಆರೋಗ್ಯ ವಿಚಾರಿಸಲು ಬೆಂಗಳೂರಿನ ಶಾಸಕ ರವಿ ಸುಬ್ರಹ್ಮಣ್ಯ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದರು. ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ, ಪುತ್ತಿಗೆ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪೇಜಾವರ ಶ್ರೀಗಳ ದರ್ಶನ ಮಾಡಿದ ತೇಜಸ್ವಿ ಸೂರ್ಯ, ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರದ್ದು ಮಗುವಿನಂಥ ಮುಗ್ಧ ಮನಸ್ಸು. ಸ್ವಾಮೀಜಿ, ಶೀಘ್ರ ಗುಣಮುಖರಾಗುವ ನಂಬಿಕೆ ನಮಗಿದೆ ಎಂದು ಹೇಳಿದರು.

ಕೆಎಂಸಿ‌ ಆಸ್ಪತ್ರೆ

ಸ್ವಾಮೀಜಿ ನಿತ್ಯ ಚಟುವಟಿಕೆಯಿಂದ ಇರುತ್ತಿದ್ದರು. ಅವರು ಎಂದೂ ಹಾಸಿಗೆ ಹಿಡಿದವರಲ್ಲ. ಸ್ವಾಮೀಜಿ ಆದಷ್ಟು ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಲಿ. ಅವರು ರಾಮಮಂದಿರ ನೋಡುವಂತಾಗಲಿ ಎಂದು ರವಿ ಸುಬ್ರಹ್ಮಣ್ಯ ಹೇಳಿದರು.

ಪೇಜಾವರ ಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಉಸಿರಾಡುತ್ತಿರುವುದನ್ನು ನಾನು ಕಂಡಿದ್ದೇನೆ. ಎಂಆರ್​ಐ ರಿಪೋರ್ಟ್​ಗೆ ಎಲ್ಲರೂ ಕಾಯುತ್ತಿದ್ದಾರೆ. ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ ಎಂದು ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

Intro:ಉಡುಪಿ

ಪೇಜಾವರ ‌ಶ್ರೀಗಳ‌ ಅನಾರೋಗ್ಯ ಹಿನ್ನೆಲೆ: ಶ್ರೀಗಳ‌ ಭೇಟಿ ಮಾಡಲು ಇಂದಿನಿಂದ ನಿರ್ಬಂಧ
ಉಡುಪಿ:

ಪೇಜಾವರ ಶ್ರೀಗಳ‌ನ್ನ ಭೇಟಿ ಮಾಡಲು ಇಂದಿನಿಂದ ನಿರ್ಬಂಧ ವಿಧಿಸಲಾಗಿದೆ.ಗಣ್ಯರ ಭೇಟಿ ಹಿನ್ನಲೆ ಚಿಕಿತ್ಸೆಗೆ ಅಡ್ಡಿ‌ಯಾಗುತ್ತಿದ್ದು ಈ ಕ್ರಮ‌ಕೈಗೊಳ್ಳಲಾಗಿದೆ.
ಚಿಕಿತ್ಸೆಗೆ ಅಡ್ಡಿ‌‌ ಹಿನ್ನಲೆ ಭೇಟಿಗೆ ಕೆಎಂಸಿ‌ ಆಸ್ಪತ್ರೆ ಅಧೀಕ್ಷಕರು ನಿರ್ಬಂಧ ಹೇರಿದ್ದಾರೆ.
ಯಾರನ್ನೂ ಭೇಟಿ ಮಾಡಲು ಅವಕಾಶ ಇಲ್ಲ ಅಂತಾ ಆಸ್ಪತ್ರೆ ಅಧೀಕ್ಷಕರು ಹೇಳಿದ್ದಾರೆ.
ಮಣಿಪಾಲ ಆಸ್ಪತ್ರೆಗೆ ಬೆಂಗಳೂರಿನ ಶಾಸಕ ರವಿ ಸುಭ್ರಮಣ್ಯ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದಾರೆ.

ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ, ಪುತ್ತಿಗೆ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಪೇಜಾವರ ಶ್ರೀಗಳ ದರ್ಶನ ಮಾಡಿ ಬಂದ ಸಂಸದ ತೇಜಸ್ವಿ ಸೂರ್ಯ
ಪೇಜಾವರ ಶ್ರೀಗಳು ಸದ್ಯ ಟ್ರೀಟ್ ಮೆಂಟ್ ನಲ್ಲಿದ್ದಾರೆ.ಅವರು ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ.ಅವರದ್ದು ಮಗುವಿನಂತಹಾ ಮುಗ್ಧತೆ, ಅವರು ಅದಮ್ಯ ಚೈತನ್ಯ.ಸ್ವಾಮೀಜಿ ಮತ್ತಷ್ಟು ಧರ್ಮದ ಕೆಲಸ ಮಾಡುವಂತಾಗಲಿ.
ವೈದ್ಯರ ಜೊತೆ ಮಾತನಾಡಿದ ನಂತರ ಅವರು, ಗುಣಮುಖರಾಗುವ ನಂಬಿಕೆ ಮೂಡಿದೆ ಅಂತಾ ಹೇಳಿದ್ದಾರೆ.

-------

ಶಾಸಕ ರವಿ ಸುಬ್ರಹ್ಮಣ್ಯ ಹೇಳಿಕೆ

ಸ್ವಾಮೀಜಿ ಯಾವತ್ತೂ ಆಕ್ಡಿವ್ ಆಗಿರುವವರು.ಅವರು ಯಾವತ್ತೂ ಹಾಸಿಗೆ ಹಿಡಿದವರಲ್ಲ.ಸ್ವಾಮೀಜಿ ಆದಷ್ಟು ಬೇಗ ಚೇತರಿಸುವಂತಾಗಲಿ.
ಶ್ರೀಗಳು ಎಲ್ಲಾ ಧರ್ಮ, ಜಾತಿಗೆ ಬೇಕಾದವರು.ತುಳಿತಕ್ಕೆ ಒಳಗಾದವರ ಪರ ಚಿಂತನೆ ಇರುವ ಸ್ವಾಮೀಜಿ.ಆದಷ್ಟು ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ.ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಲಿ.
ಅವರು ರಾಮಮಂದಿರ ನೋಡುವಂತಾಗಲಿ ಅಂತಾ ರವಿ ಸುಬ್ರಹ್ಮಣ್ಯ ಹೇಳಿಕೆದ್ದಾರೆ.

ಪುತ್ತಿಗೆ ಶ್ರೀ ಕೆಎಂಸಿಗೆ ಭೇಟಿ ನೀಡಿದ್ದು
ಪೇಜಾವರಶ್ರೀ ಯಥಾಸ್ಥಿತಿ ಇದೆ
ಉಸಿರಾಟ ನಡೆಯುತ್ತಿರುವುದನ್ನು ನಾನು ಕಂಡದ್ದೆನೆ.
ಎಂಆರ್ ಐ ರಿಪೋರ್ಟ್ ಗೆ ಎಲ್ಲರೂ ಕಾಯುತ್ತಿದ್ದಾರೆ.
ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಿದೆ.
ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ
ದೇಶಾದ್ಯಂತ ಪೇಜಾವರಶ್ರೀ ಆರೋಗ್ಯ ವೃದ್ಧಿಗೆ ಪೂಜೆಗಳಾಗುತ್ತಿದೆ ಅಂತಾ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.Body:PejavaraConclusion:Pejavara
ETV Bharat Logo

Copyright © 2024 Ushodaya Enterprises Pvt. Ltd., All Rights Reserved.