ಉಡುಪಿ: ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಜೊತೆ ದುರ್ವರ್ತನೆ ತೋರಿದ ಆರೋಪದ ಮೇಲೆ ಕುಂದಾಪುರದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ವಿನಾಕಾರಣ ಬೈಕ್ನಲ್ಲಿ ತಿರುಗಾಡುತ್ತಿದ್ದ. ಮಾಸ್ಕ್ ಹಾಕು, ಮನೆಗೆ ಹೋಗು ಅಂತಾ ಪೊಲೀಸರು ಬುದ್ಧಿ ಹೇಳಿದ್ದಕ್ಕೆ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮಾಸ್ಕ್ ಅಥವಾ ಕರ್ಚೀಫ್ ತಗೊಳೋಕೆ ಹಣ ಇಲ್ಲವೆಂದು ಉಡಾಫೆ ಉತ್ತರ ನೀಡಿದ್ದಾನೆ. ಇದರಿಂದ ರೋಸಿ ಹೋದ ಪೊಲೀಸರು ಯುವಕನಿಗೆ ಲಾಠಿ ಏಟು ನೀಡಿದ್ರು. ಆಗ ಡಿಸಿಗೆ ಕರೆ ಮಾಡುವುದಾಗಿ ಪೊಲೀಸರೊಂದಿಗೆ ಯುವಕ ವಾಗ್ವಾದಕ್ಕಿಳಿದಿದ್ದ.
ನಾವೇನು ಇಲ್ಲಿ ಕತ್ತೆ ಕಾಯೋದಕ್ಕೆ ನಿಂತಿದೀವಾ? ನಿಮ್ಮ ಆರೋಗ್ಯಕ್ಕೆ ಹಗಲು ರಾತ್ರಿ ಕೆಲಸ ಮಾಡ್ತಿದ್ರೆ ಉಡಾಫೆ ಉತ್ತರ ಕೊಡ್ತಿಯಾ ಕೋಪಗೊಂಡ ಎಸ್ಐ ಹರೀಶ್ ನಾಯ್ಕ್, ಯುವಕನಿಗೆ ಲಾಠಿ ಏಟು ನೀಡಿದ್ದಾರೆ. ಸ್ಥಳದಲ್ಲೇ ಇದ್ದ ಎಸಿ ಕೆ.ರಾಜು ಅವರಿಗೆ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್ 269, 353 ಅಡಿ ಪ್ರಕರಣ ದಾಖಲಾಗಿದೆ.