ಉಡುಪಿ: ನಗರದಲ್ಲಿ ಲಾಕ್ಡೌನ್ ಹಿನ್ನೆಲೆ ದಾನಿಗಳಿಂದ ಮದ್ಯಾಹ್ನ ಹಾಗೂ ರಾತ್ರಿಯ ಊಟ ಎಲ್ಲೆಡೆ ನಡೀತಾ ಇದೆ. ಅದರಂತೆ ಬಡವರು ಮತ್ತು ಅಶಕ್ತರ ಹೊಟ್ಟೆ ತಣಿಸುವ ಉದ್ದೇಶದಿಂದ ದಾನಿಗಳು ಬಿರಿಯಾನಿ ವಿತರಿಸಿದ್ದಾರೆ.
ಜಿಲ್ಲೆಯ ಹಲವೆಡೆಗಳಲ್ಲಿ ನಿರಂತರ ಅನ್ನದಾನ ಕಾರ್ಯ ನಡೀತಾ ಇದೆ. ಶುಕ್ರವಾರವಾದ ಇವತ್ತು ಬಡವರಿಗೆ ಮತ್ತು ಅಶಕ್ತರಿಗೆ ಬಿರಿಯಾನಿ ವಿತರಿಸಿದ್ದು ವಿಶೇಷವಾಗಿತ್ತು.
ನಗರದ ಸಿಟಿ ಬಸ್ ನಿಲ್ದಾಣ ಸಮೀಪ ನಿತ್ಯ ದಾನಿಗಳ ಸಹಾಯದಿಂದ ಮಧ್ಯಾಹ್ನ ಮತ್ತು ರಾತ್ರಿ ವೆಜ್ ಪಲಾವ್ ಮತ್ತು ಮೊಟ್ಟೆ ವಿತರಿಸಲಾಗುತ್ತಿದೆ.
ಆದರೆ, ಇವತ್ತು ಚಿಕನ್ ಬಿರಿಯಾನಿ ಮಾಡಿ ಬಡವರಿಗೆ ಹಂಚಲಾಯಿತು. ಸುಮಾರು ಆರುನೂರಕ್ಕೂ ಅಧಿಕ ನಿರ್ಗತಿಕರು ಅಶಕ್ತರು ಬಿರಿಯಾನಿ ಊಟದ ಪೊಟ್ಟಣ ಸ್ವೀಕರಿಸಿದ್ರು. ಬಿರಿಯಾನಿ ವಿತರಿಸಲಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಸಾಕಷ್ಟು ಬಡವರು ಆಗಮಿಸಿದ್ದರು.