ETV Bharat / state

ಡೈರಿಗೆ ಹೋಗುತ್ತಿದ್ದ ಮಹಿಳೆ ಮೇಲೆ ಚಿರತೆ ದಾಳಿ: ಗಂಭೀರ ಗಾಯ - injury

ಕುಂದಾಪುರ ತಾಲೂಕು ಜಪ್ತಿಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಮುಖ, ಹಣೆ, ಕುತ್ತಿಗೆ ಹಾಗೂ ಕಿವಿ, ಕೈ ಭಾಗವನ್ನು ಗಾಯಗೊಳಿಸಿದೆ.

ಚಿರತೆ
author img

By

Published : Mar 4, 2019, 7:47 PM IST

ಉಡುಪಿ: ನಸುಕಿನ ವೇಳೆ ಹಾಲು ಡೈರಿಗೆ ಹಾಲು ಕೊಡಲು ತೆರಳುತ್ತಿದ್ದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಕುಂದಾಪುರ ತಾಲೂಕು ಜಪ್ತಿಯಲ್ಲಿ ನಡೆದಿದೆ.

ಮಹಿಳೆ ತನ್ನ ಹುಣಸೆಕಟ್ಟೆಯ ಮನೆಯಿಂದ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ಸಮೀಪದ ಹಾಡಿಯಿಂದ ಹಾರಿದ ಚಿರತೆ ಮಹಿಳೆ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ಮಹಿಳೆಯ ಮುಖ, ಹಣೆ, ಕುತ್ತಿಗೆ ಹಾಗೂ ಕಿವಿ, ಕೈ ಭಾಗಕ್ಕೆ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಗಾಯಗೊಂಡ ಮಹಿಳೆಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಭಾಗದಲ್ಲಿ ಚಿರತೆ ಓಡಾಡ ಇದೇ ಮೊದಲು ಎನ್ನಲಾಗಿದೆ. ಅಚಾನಕ್ ಆಗಿ ಚಿರತೆ ಕಾಣಿಸಿಕೊಂಡಿರುವುದು ಅಲ್ಲದೆ, ದಾಳಿ ಮಾಡಿ ಗಂಭೀರ ಗಾಯಗೊಳಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಚಿರತೆ ದಾಳಿ ಮಾಡಿದ ಪ್ರದೇಶಕ್ಕೆ ಅರಣ್ಯ ಇಲಾಖೆಯ ಕುಂದಾಪುರ ಆರ್.ಎಫ್.ಒ ಪ್ರಭಾಕರ್ ಕುಲಾಲ್, ಉಪವಲಯ ಅರಣ್ಯಾಧಿಕಾರಿ ಉದಯ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.