ETV Bharat / state

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ತುಮಕೂರು ಜಿಲ್ಲಾಡಳಿತ ಸಿದ್ಧತೆ!

ಈಗಾಗಲೇ ತುಮಕೂರು ನಗರದಲ್ಲಿ ಇರುವಂತಹ ಎರಡು ಮೆಡಿಕಲ್ ಕಾಲೇಜುಗಳಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಇನ್ನೂ ರೋಗಿಗಳ ಸಂಖ್ಯೆ ಹೆಚ್ಚಾಗುವಂತಹ ಸಾಧ್ಯತೆಗಳು ಇರುವುದರಿಂದ ತುಮಕೂರು ನಗರದಲ್ಲಿ ಕಳೆದ ವರ್ಷ ಆರಂಭಿಸಲಾಗಿದ್ದ ಐಸೋಲೇಷನ್ ಕೇಂದ್ರವನ್ನು ಪುನಃ ತಡೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

Tumkur District administration preparing for provide adequate treatment to the infected
ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ತುಮಕೂರು ಜಿಲ್ಲಾಡಳಿತ ಸಿದ್ಧತೆ!
author img

By

Published : Apr 16, 2021, 3:17 PM IST

ತುಮಕೂರು: ಕೋವಿಡ್​ ಎರಡನೇ ಅಲೆ ಹರಡುವಿಕೆ ಜೋರಾಗಿಯೇ ಇದೆ. ಕೋವಿಡ್​ ಸೋಂಕಿತರಿಗೆ ಮತ್ತು ಇತರೆ ಚಿಕಿತ್ಸೆ ಸಲುವಾಗಿ ಬೆಡ್​ಗಳ ಕೊರತೆಯಾಗದಂತೆ ಮೆಡಿಕಲ್ ಕಾಲೇಜುಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಂಡಿದೆ. ಜತೆಗೆ ಐಸೋಲೇಷನ್ ಕೇಂದ್ರವನ್ನು ತೆರೆಯಲು ತುಮಕೂರು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ದಿನೇ - ದಿನೆ ಸೋಂಕು ಪ್ರಕರಣಗಳು ತೀವ್ರವಾಗಿ ಏರುತ್ತಿದೆ. ಜಿಲ್ಲೆಯಲ್ಲಿ ಕೋವಿಡ್​ ಟೆಸ್ಟಿಂಗ್​​​ಗಳ ಮೂಲಕ ಪೀಕ್ಷಾ ಪ್ರಮಾಣವನ್ನೂ ಹೆಚ್ಚು ಮಾಡಲಾಗಿದೆ. ಸೋಂಕಿತರು ಮತ್ತು ಸಾಮಾನ್ಯ ರೋಗಿಗಳು ಹೆಚ್ಚಾಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಕಾರ್ಯ ಹೆಚ್ಚಿದೆ.

ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ತುಮಕೂರು ಜಿಲ್ಲಾಡಳಿತ ಸಿದ್ಧತೆ!

ತುಮಕೂರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕಳೆದ ವರ್ಷ ಕೊರೊನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ಸಂದರ್ಭದಲ್ಲಿ ರೋಗಿಗಳಿಂದ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಯಿತು ಎಂಬ ಆರೋಪಗಳು ಈಗಾಗಲೇ ದಟ್ಟವಾಗಿದೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.

ಇನ್ನೊಂದೆಡೆ ರೋಗಿಗಳಿಗೆ ಅತೀ ಅಗತ್ಯವಿರುವ ರೆಮಿಡೀಸೀವರ್ ಔಷಧ ಕೂಡ ಸೂಕ್ತ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಜತೆಗೆ ಹೆಚ್ಚುವರಿ ಹಣಕ್ಕೆ ಔಷಧವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕೋವಿಡ್​ ಅಟ್ಟಹಾಸ: ತುಮಕೂರು ಕೋವಿಡ್​ ಟೆಸ್ಟಿಂಗ್ ಸೆಂಟರ್​ಗಳ ಕಾರ್ಯವೈಖರಿ ಹೇಗಿದೆ?

ಜಿಲ್ಲಾಡಳಿತವು ಬಹುಮುಖ್ಯವಾಗಿ ಖಾಸಗಿ ಆಸ್ಪತ್ರೆಗಳು ಮತ್ತು ತುಮಕೂರು ನಗರದಲ್ಲಿರುವ ಎರಡು ಮೆಡಿಕಲ್ ಕಾಲೇಜುಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಂಡಿದೆ ಇನ್ನೊಂದೆಡೆ ಐಸೋಲೇಷನ್ ಕೇಂದ್ರಗಳನ್ನು ಕೂಡ ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ತುಮಕೂರು ನಗರದಲ್ಲಿ ಇರುವಂತಹ ಎರಡು ಮೆಡಿಕಲ್ ಕಾಲೇಜುಗಳಲ್ಲಿ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಇನ್ನೂ ರೋಗಿಗಳ ಸಂಖ್ಯೆ ಹೆಚ್ಚಾಗುವಂತಹ ಸಾಧ್ಯತೆಗಳು ಇರುವುದರಿಂದ ತುಮಕೂರು ನಗರದಲ್ಲಿ ಕಳೆದ ವರ್ಷ ಆರಂಭಿಸಲಾಗಿದ್ದ ಐಸೋಲೇಷನ್ ಕೇಂದ್ರವನ್ನು ಪುನಃ ತಡೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.