ETV Bharat / state

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿ 22 ಬ್ಲಾಕ್​ ಸ್ಪಾಟ್​ಗಳು: ದಿನಕ್ಕೆ 2 ರಿಂದ 3 ಅಪಘಾತಗಳು - Tumakuru news

ತುಮಕೂರಿನ ಹೊರವಲಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ 22 ಬ್ಲಾಕ್​ ಸ್ಪಾಟ್​ಗಳನ್ನು ಪೊಲೀಸ್​ ಇಲಾಖೆ ಗುರುತಿಸಿದೆ. ಈಗಾಗಲೇ ಹೆದ್ದಾರಿಯಲ್ಲಿ ಹಲವಾರು ಗುಂಡಿಗಳು ಇವೆ. ನಿತ್ಯ ಕನಿಷ್ಠ 2 ರಿಂದ 3 ಅಪಘಾತಗಳು ಸಂಭವಿಸುತ್ತಿವೆ.

National Highway 48
ರಾಷ್ಟ್ರೀಯ ಹೆದ್ದಾರಿ 48ರಲ್ಲಿ 22 ಬ್ಲಾಕ್​ ಸ್ಪಾಟ್​
author img

By

Published : Sep 22, 2022, 2:07 PM IST

Updated : Sep 22, 2022, 3:17 PM IST

ತುಮಕೂರು: ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಜಿಲ್ಲಾ ಪೊಲೀಸ್ ಇಲಾಖೆ 22 ಅಪಘಾತ ವಲಯಗಳನ್ನು (ಬ್ಲಾಕ್ ಸ್ಪಾಟ್​ಗಳನ್ನು) ಗುರುತಿಸಿದೆ. ಇನ್ನೊಂದೆಡೆ ಈಗಾಗಲೇ ಸಾವಿರಾರು ಗುಂಡಿಗಳು ಇದ್ದು, ಅಪಘಾತಗಳು ದಿನೇ ದಿನೇ ಹೆಚ್ಚಾಗತೊಡಗಿವೆ.

ತುಮಕೂರಿನ ಕ್ಯಾತ್ಸಂದ್ರ ಗಡಿಯಿಂದ ಚಿತ್ರದುರ್ಗ ಜಿಲ್ಲೆಯ ತಾವರೆಕೆರೆಯವರಿಗೂ ರಾಷ್ಟ್ರೀಯ ಹೆದ್ದಾರಿ 48 ಹಾದು ಹೋಗಿದೆ. ಇಲ್ಲಿ ನಿತ್ಯ ಸಾವಿರಾರು ಲಘು ಹಾಗೂ ಭಾರಿ ವಾಹನಗಳು ಸಂಚರಿಸುತ್ತವೆ. ನಿತ್ಯ ಕನಿಷ್ಠ 2 ರಿಂದ 3 ಅಪಘಾತಗಳು ಸಂಭವಿಸುತ್ತಿವೆ. ಒಟ್ಟು ಒಂಬತ್ತು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಗಮಿನಿಸಬೇಕಾದ ಅಂಶವಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ 22 ಬ್ಲಾಕ್​ ಸ್ಪಾಟ್​ಗಳು

ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದರಲ್ಲೂ ಮುಖ್ಯವಾಗಿ ರಾತ್ರಿ ವೇಳೆ ಅಪಘಾತಗಳು ಸಂಭವಿಸುತ್ತಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ. ಅಲ್ಲದೇ ಇದನ್ನು ತಡೆಗಟ್ಟಲು ಹರಸಾಹಸ ಪಡುತ್ತಿದೆ. ಮೂರು ಪಥದ ರಸ್ತೆಯಲ್ಲಿ ಭಾರಿ ವಾಹನಗಳಾದ ಲಾರಿಗಳಿಗೆ ಇನ್ನರ್ ಲೇನ್​ನಲ್ಲಿ ಬರಬಾರದೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸಾವಿಗೆ ರಹದಾರಿಯಾದ ರಾಷ್ಟ್ರೀಯ ಹೆದ್ದಾರಿ 48: ತುಮಕೂರು ರಸ್ತೆಯಲ್ಲಿ ಸಾವಿರಾರು ಗುಂಡಿಗಳು

ವೇಗವಾಗಿ ಸಂಚರಿಸಲು ಅವಕಾಶವಿರುವ ಲೇನ್​ಗೆ ಬಾರಿ ವಾಹನಗಳು ಬಾರದಂತೆ ನಿತ್ಯ ಪೊಲೀಸರು ಪೆಟ್ರೋಲಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಅಪಘಾತ ವಲಯ ಬ್ಲಾಕ್ ಸ್ಪಾಟ್ ಗಳೆಂದು ಗುರುತಿಸಿರುವ ಸ್ಥಳಗಳಲ್ಲಿ ವಾಹನಗಳ ವೇಗದ ಮಿತಿಗೆ ಕಡಿವಾಣ ಹಾಕಲಾಗುತ್ತಿದೆ. ಈ ಮೂಲಕ ರಸ್ತೆ ಅಪಘಾತಗಳ ಸಂಖ್ಯೆ ಕ್ಷೀಣಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Last Updated : Sep 22, 2022, 3:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.