ETV Bharat / state

Text book revision: ಪಾರ್ಲಿಮೆಂಟ್‌ ಎಲೆಕ್ಷನ್‌ ಮೇಲೆ ಕಣ್ಣಿಟ್ಟು ಮುಸ್ಲಿಮರ ವೋಟ್‌ಗಾಗಿ ಸರ್ಕಾರದ ನಿರ್ಣಯ- ಬಿ.ಸಿ. ನಾಗೇಶ್ - ಸರ್ಕಾರದ ನಿರ್ಣಯ ಆಶ್ಚರ್ಯವೇನಲ್ಲ

ಸರ್ಕಾರ ಒಂದು ಸಮುದಾಯದ ವೋಟ್​ ಬ್ಯಾಂಕ್​ಗಾಗಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬಿ.ಸಿ. ನಾಗೇಶ್​ ಆರೋಪಿಸಿದ್ದಾರೆ.

Former Education Minister BC Nagesh
ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್
author img

By

Published : Jun 16, 2023, 5:52 PM IST

ತುಮಕೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸರ್ಕಾರ ತೆಗೆದುಕೊಂಡ ನಿರ್ಣಯ ಆಶ್ಚರ್ಯ ಉಂಟುಮಾಡಿಲ್ಲ. ವಿಚಾರ ತಿಳಿದುಕೊಳ್ಳದೇ, ತಾವು ಮುಖ್ಯಮಂತ್ರಿಯಾದ ತಕ್ಷಣವೇ ಸಿದ್ದರಾಮಯ್ಯ ಈ ನಿರ್ಣಯವನ್ನು ಅನೌನ್ಸ್ ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ತಿಪಟೂರಿನಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಎಲ್ಲ ನಿರ್ಣಯಗಳನ್ನು ಗಮನಿಸಿದಾಗ, ಅವರ ಕಣ್ಣು ಇವತ್ತು ಪಾರ್ಲಿಮೆಂಟ್ ಎಲೆಕ್ಷನ್ ಮೇಲಿದೆ ಅನ್ನೋದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಆ್ಯಂಡ್ ಗ್ಯಾಂಗ್ ಎಲ್ಲರದ್ದೂ ದೇಶದಲ್ಲಿ ಮೋದಿ ಅವರನ್ನು ಅಧಿಕಾರದಿಂದ ಇಳಿಸಬೇಕು‌‌ ಎಂಬುದು ಒಂದೇ ಉದ್ದೇಶ. ಅದು ಬಿಟ್ಟರೆ ಏನೂ ಇಲ್ಲ. ಮೋದಿ ಅವರನ್ನು ಯಾಕೆ ಅಧಿಕಾರದಿಂದ ಇಳಿಸಬೇಕು ಎನ್ನುವುದರ ಬಗ್ಗೆ ಒಂದು ಮಾತನ್ನೂ ಯಾರು ಆಡಲಿಲ್ಲ ಎಂದರು.

ಮುಂಬರುವ ಚುನಾವಣೆಗೆ ಮತ್ತೆ ಒಂದು ಸಮುದಾಯ ವೋಟ್ ವಿಭಜನೆ ಆಗಬಾರದು ಅನ್ನೋ ಕಾರಣಕ್ಕೆ, ಮತ್ತೆ ಒಟ್ಟುಗೂಡಿಸುವ ಕೆಲಸಕ್ಕೆ ಮುಂದಾಗ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿಯವರು ಶಿಕ್ಷಣದಲ್ಲಿ ಕೇಸರೀಕರಣ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ. ಅದು ಯಾವುದು ಎಂದು ಹೇಳೋಕೆ ಅವರು ತಯಾರಿಲ್ಲ. ಯಾವ ಪಾಠ ಕೇಸರೀಕರಣ ಆಗಿದೆ ಅಂತ ಹೇಳೋಕೆ ಅವರಿಗೆ ಗೊತ್ತಿಲ್ಲ.

ಇದು ದ್ವೇಷದ ರಾಜಕಾರಣ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುವ ಸರ್ಕಾರ. ಕಾಂಗ್ರೆಸ್ ಸರ್ಕಾರ ಬರೀ ಶಿಕ್ಷಣಕ್ಕೆ ಮಾತ್ರ ಕೈ ಹಾಕಿಲ್ಲ. ನಾಲ್ಕಕ್ಕೆ ಕೈ ಹಾಕಿದ್ದಾರೆ. ಆ ನಾಲ್ಕಕ್ಕೂ ಕೈ ಹಾಕಿರುವ ಉದ್ದೇಶ ಒಂದು ಸಮುದಾಯದ ವೋಟ್ ಬ್ಯಾಂಕ್ ಅಷ್ಟೇ. ಹಿಜಾಬ್, ಹಲಾಲ್, ಜಟ್ಕಾ, ಕೇಸರೀಕರಣ. ಹಿಜಾಬ್ ವಿರುದ್ಧ ಹೈಕೋರ್ಟ್​ನಲ್ಲಿ ತೀರ್ಪು ಬಂದರೂ ಕೂಡಾ, ನಾವು ಅದನ್ನು ತೆಗೆಯುತ್ತೇವೆ ಅಂತ ಹೊರಟಿದ್ದಾರೆ. ಇವರ ವರ್ತನೆ ಬಗ್ಗೆ ನನಗೆ ಸಾಕಷ್ಟು ಅನುಮಾನಗಳಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಮುಂಗಾರು ಮಳೆ ಇನ್ನೂ ಬಂದಿಲ್ಲ. ರೈತರ ಕಷ್ಟವನ್ನು ಕೇಳೋರಿಲ್ಲದಂತಾಗಿದೆ. ರೈತ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಅವರ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಇನ್ನು ಕೊರೊನಾ ಕಾಲದಲ್ಲಿ ಶಿಕ್ಷಣದಲ್ಲಿ ಮಕ್ಕಳಿಗೆ ಆಗಿರುವಂತಹ ವ್ಯತ್ಯಾಸ, ಮಕ್ಕಳು ಪಾಠವನ್ನು ಕೇಳದೇ ಮುಂದೆ ಬಂದಿದ್ದಾರೆ. ಮೂರು ವರ್ಷ ಕಲಿಯಲಿ ಎಂದು ಅವರಿಗೆ ನಾವು ಕಲಿಕಾ ಚೇತರಿಕೆ ಮಾಡಿದೆವು. ಅದರ ಬಗ್ಗೆಯೂ ಇವರಿಗೆ ಯೋಚನೆ ಇಲ್ಲ ಎಂದು ಟೀಕಿಸಿದರು.

ಮಕ್ಕಳ ಆರೋಗ್ಯಕೋಸ್ಕರ ಬಾಳೆಹಣ್ಣು, ಮೊಟ್ಟೆ, ಚಿಕ್ಕಿ ಕೊಡ್ಬೇಕು ಅಂತ ನಿರ್ಣಯ ಮಾಡಿ, ಅದನ್ನು ನೂರು ದಿನಗಳವರೆಗೆ ನಾವು ವಿಸ್ತರಣೆ ಮಾಡಿದ್ದೆವು. ಇವರಿಗೆ ಅದರ ಬಗ್ಗೆ ಯೋಚನೆ ಇಲ್ಲ. ಈಗ ತರಗತಿಗಳು ಸರಿಯಾದ ಸಮಯಕ್ಕೆ ಶುರುವಾಗಬೇಕು. ಈಗಾಗಲೇ ರಜೆ ಮುಗಿಯೋಕು ಮುಂಚೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳು ಶಾಲೆಗಳಿಗೆ ತಲುಪಿ, ಸರಿಯಾ ಸಮಯಕ್ಕೆ ಶಿಕ್ಷಕರನ್ನೂ ಹೊಂದಿಸಿ, ಶಾಲೆ ಶುರುವಾಗುವ ಥರ ನಾವು ಮಾಡಿದ್ದೆವು. ಅಷ್ಟರಲ್ಲಿ ಇವರಿಗೆ ಪಠ್ಯಪುಸ್ತಕ ಕಾಣಿಸ್ತು, ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್​ನನ್ನು ವೈಭವೀಕರಿಸುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನಾವು ಯಾವುದನ್ನು ತೆಗೆದಿದ್ದೆವೋ ಅದನ್ನು ಸೇರಿಸಿ ಅವಾಂತರ ಸೃಷ್ಟಿ ಮಾಡ್ತಿದ್ದಾರೆ. ಆರ್​ಎಸ್​ಎಸ್​ನ ಹೆಡ್ಗೆವಾರ್ ಭಾಷಣದ ತುಣಕನ್ನು ತೆಗೆಯೋದಿಕ್ಕೆ ಹೊರಟಿದ್ದಾರೆ. ಇಷ್ಟೆಲ್ಲ ಮಾಡ್ತಿರೊದು ಒಂದು ಸಮುದಾಯದ ವೋಟ್ ಬ್ಯಾಂಕ್​ಗಾಗಿ ಎಂದು ದೂರಿದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಈ ದೇಶದ ವಿಚಾರದ ವಿರೋಧಿಗಳು. ಇವರು ಆರ್​ಎಸ್​ಎಸ್ ವಿಚಾರವನ್ನು ಇಟ್ಟುಕೊಂಡು, ಮುಸಲ್ಮಾನರ ವೋಟ್ ಪಡೆಯುತ್ತಿದ್ದಾರೆ.

ಹಿಂದು ಮತ್ತು ಈ ದೇಶದ ವಿಚಾರದ ವಿರೋಧಿಗಳಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ, ಆರ್​ಎಸ್​ಎಸ್​​ಗೆ ಕೊಟ್ಟಿರುವ ಜಮೀನನ್ನು ವಾಪಸ್ ತೆಗೀತೀವಿ ಅಂತ ಹೇಳ್ತಿದ್ದಾರೆ. ಆರ್​ಎಸ್​ಎಸ್​ಗೆ ಜಮೀನೇ ಕೊಟ್ಟಿಲ್ಲ. ಈಗ ವಾಪಸ್ ತೆಗೆದುಕೊಳ್ತೀವಿ ಅಂತ ಮಾತಾಡಿಕೊಳ್ತಿದ್ದಾರೆ. ಇವರು ಇಷ್ಟೆಲ್ಲ ಮಾಡ್ತಿರೋದೇ ಒಂದು ಸಮುದಾಯದ ವೋಟ್​ಗಾಗಿ. ಪಠ್ಯಪುಸ್ತಕದಲ್ಲಿ ಆರ್​ಎಸ್​ಎಸ್ ತೆಗೆದು ಹಾಕುತ್ತೇವೆ, ಸಾವರ್ಕರ್ ಹಿಂದೂ ನಾಯಕ ಅದಕ್ಕೆ ಅವರನ್ನು ತೆಗೆಯುತ್ತೇವೆ ಅಂದಾಗ, ಸಾಬ್ರು ಖುಷಿಯಾಗ್ತಾರೆ.

ಚಕ್ರವರ್ತಿ ಸೂಲಿಬೆಲೆ ಹಿಂದುತ್ವದ ಬಗ್ಗೆ ಸಾಕಷ್ಟು ಭಾಷಣ ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಅನೇಕ ಭಾಷಣಗಳನ್ನು ಮಾಡಿದ್ದಾರೆ. ಇದು ವೈಯಕ್ತಿಕ ದ್ವೇಷದಿಂದ ತೆಗೀತಿರೋದು.
ಇದಲ್ಲದೆ ರಾಜ್ ಗುರು, ಸುಖದೇವ್, ಭಗತ್ ಸಿಂಗ್, ಅವರ ಬಗ್ಗೆ ಇರುವಂತಹ ಪಾಠಗಳನ್ನು ತೆಗೆಯೋದಿಕ್ಕೆ ಹೊರಟಿದ್ದಾರೆ. ಇದೆಲ್ಲ ಮುಸಲ್ಮಾನರ ವೋಟ್ ಬ್ಯಾಂಕ್​ಗಾಗಿ ಎಂದು ದೂರಿದರು.

ಇದನ್ನೂ ಓದಿ: CM Siddaramaiah: ಭಾರತೀಯ ಆಹಾರ ನಿಗಮದಿಂದ ಅಕ್ಕಿ ಕೊಡುವ ಬದ್ಧತೆಯ ಪತ್ರ ಟ್ವೀಟ್ ಮಾಡಿ ಸಿ.ಟಿ. ರವಿಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.