ETV Bharat / state

ಸೋಂಕಿತ ಮಹಿಳೆಯ ಶವ ಸಾಗಾಟಕ್ಕೆ ಗ್ರಾಮಸ್ಥರ ಹಿಂದೇಟು: ಪಿಪಿಇ ಕಿಟ್​ ಧರಿಸಿ ಕೈ ಜೋಡಿಸಿದ ತಹಶೀಲ್ದಾರ್​! - kuppuru people not helps to carrying the dead body

ಕೋವಿಡ್​ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಊರಿನ ಜನ ಮುಂದಾಗದಿದ್ದಾಗ ಸ್ವತಃ ತಹಶೀಲ್ದಾರ್​ ಅವರೇ ಕೈಜೋಡಿಸಿರುವ ಘಟನೆ ತುಮಕೂರಿನ ಕುಪ್ಪೂರು ಗ್ರಾಮದಲ್ಲಿ ನಡೆದಿದೆ.

tahsildar-g-v-mohan-helps-to-carrying-the-corona-dead-body
ಪಿಪಿಇ ಕಿಟ್​ ಧರಿಸಿ ಶವ ಸಾಗಾಟಕ್ಕೆ ಸಹಾಯ ಮಾಡಿದ ತಹಶೀಲ್ದಾರ್​
author img

By

Published : May 11, 2021, 9:57 PM IST

ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಶವವನ್ನು ಮನೆಯಿಂದ ಸಾಗಿಸಲು ಗ್ರಾಮಸ್ಥರು ಮುಂದಾಗದ ಹಿನ್ನೆಲೆ ಸ್ಥಳದಲ್ಲಿದ್ದ ತಹಶೀಲ್ದಾರ್​ ಜಿ ವಿ ಮೋಹನ್ ಸ್ವತಃ ಪಿಪಿಇ ಕಿಟ್ ಧರಿಸಿ ತಮ್ಮ ಸಿಬ್ಬಂದಿಯೊಂದಿಗೆ ಗ್ರಾಮದಿಂದ ಶವ ಸಾಗಿಸಿ ಮಾದರಿಯಾಗಿದ್ದಾರೆ.

ಪಿಪಿಇ ಕಿಟ್​ ಧರಿಸಿ ಶವ ಸಾಗಾಟಕ್ಕೆ ಸಹಾಯ ಮಾಡಿದ ತಹಶೀಲ್ದಾರ್​

ತಾಲೂಕಿನ ಕುಪ್ಪೂರು ಗ್ರಾಮದ ಜಯಮ್ಮ(64) ಎಂಬ ಮಹಿಳೆಗೆ ಕೊರೊನಾ ದೃಢಪಟ್ಟಿದ್ದರಿಂದ ಹಲವು ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ತಹಶೀಲ್ದಾರ್​ ಜಿ ವಿ ಮೋಹನ್ ಶವ ಸಾಗಿಸಲು ಯಾರೂ ಕೂಡ ಮುಂದಾಗದಿರುವುದನ್ನು ಕಂಡರು. ತಕ್ಷಣ ರೆವಿನ್ಯೂ ಇನ್ಸ್​ಪೆಕ್ಟರ್​ ಶಿವಣ್ಣ , ವಿಲೇಜ್ ಅಕೌಂಟೆಂಟ್ ದೇವರಾಜು, ಚಾಲಕ ಮಧು ಹಾಗೂ ಆ್ಯಂಬುಲೆನ್ಸ್​ನ ಜಹೀರ್ ಎಂಬುವವರ ಸಹಾಯದೊಂದಿಗೆ ಮನೆಯೊಳಗಿಂದ ಶವ ಹೊರತೆಗೆದು, ನಂತರ ನಗರದ ವಿದ್ಯುತ್ ಚಿತಾಗಾರಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಲು ನೆರವಾದರು.

ಓದಿ: ಲಾಕ್​ಡೌನ್ ಇರುವವರೆಗೂ ಕಾರ್ಮಿಕರಿಗೆ, ನಿರ್ಗತಿಕರಿಗೆ ಆಹಾರ ಭದ್ರತೆ ಕಲ್ಪಿಸಿ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.