ETV Bharat / state

ಮಗುವನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ! - Tumkur

ಹೆತ್ತ ತಾಯಿಯಿಂದಲೇ ಒಂದು ವರ್ಷದ ಹೆಣ್ಣು ಮಗು ಹತ್ಯೆ- ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ತಿಪ್ಪಾಪುರ ಛತ್ರದ ಬಳಿ ಘಟನೆ

tumkur
ತುಮಕೂರು
author img

By

Published : Jun 10, 2023, 7:03 AM IST

ತುಮಕೂರು: ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡ್​​ನಿಂದ ಕೊಯ್ದು ಹತ್ಯೆ ಮಾಡಿದ ತಾಯಿ ಬಳಿಕ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜಿಲ್ಲೆಯ ಮಧುಗಿರಿ ಪಟ್ಟಣದ ತಿಪ್ಪಾಪುರ ಛತ್ರದ ಬಳಿ ನಿನ್ನೆ(ಶುಕ್ರವಾರ) ಈ ಘಟನೆ ನಡೆದಿದೆ. ಕ್ರಿತೀಶ್ (1) ಮೃತ ಮಗು. ಶ್ವೇತಾ (28) ಮಗು ಕೊಲೆ ಮಾಡಿದ ತಾಯಿ.

ಮನೆಯಲ್ಲಿ ಆಟವಾಡುತ್ತಿದ್ದ ಮಗು ಕ್ರಿತೀಶ್ ಕೈಯನ್ನು ಶ್ವೇತಾ ಏಕಾಏಕಿ ಕೊಯ್ದಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಮಗು ಸ್ಥಳದಲ್ಲಿಯೇ ಸಾವನಪ್ಪಿದೆ. ಬಳಿಕ ತಾನು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅಕ್ಕಪಕ್ಕದ ಮನೆಯವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧುಗಿರಿ ನಿವಾಸಿ ಶಿವಾನಂದ ಎಂಬುವ ಪತ್ನಿಯಾಗಿದ್ದ ಶ್ವೇತಾ ಮಾನಸಿಕ ಅಸ್ವಸ್ಥೆಯಾಗಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನ ನಿಮಾನ್ಸ್​​​ನಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆತ್ತ ಮಗುವನ್ನೇ ಕೊಂದ ತಾಯಿ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಪತಿ ವ್ಯಕ್ತಪಡಿಸಿದ ಶಂಕೆಯಿಂದ ನಡೆದ ಕಿತ್ತಾಟದಲ್ಲಿ ತಾಯಿಯೊಬ್ಬಳು 5 ತಿಂಗಳ ಹಸುಳೆಯನ್ನು ಹೊಡೆದು, ಬಾವಿಗೆಸೆದು ಜೀವ ತೆಗೆದಿರುವ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಕೋಪದಲ್ಲಿ ಮಾಡಿದ ಪ್ರಮಾದದಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಮಗು ಅಪಹರಣವಾದ ಕಥೆ ಕಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ವಿಚಾರಣೆಯ ವೇಳೆ ನಡೆದ ಘಟನೆಯನ್ನು ಕ್ರೂರಿ ತಾಯಿಯಿಂದಲೇ ಬಯಲಿಗೆಳೆದಿದ್ದರು. ಮಹಾರಾಷ್ಟ್ರದ ಶಿರಡಿಯ ಕೋಪರಗಾಂವ್ ತಾಲೂಕಿನ ಕಾರ್ವಾಡಿಯಲ್ಲಿ ಈ ಘಟನೆ ನಡೆದಿತ್ತು.

ಘಟನೆಯ ವಿವರ: ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸೂರಜ್ ಮತ್ತು ಗಾಯತ್ರಿ ಎಂಬುವರಿಗೆ ಈಚೆಗೆ ಮಗು ಜನಿಸಿತ್ತು. ಹಸುಳೆಗೆ ಶಿವಂ ಎಂಬ ಮುದ್ದಾದ ಹೆಸರನ್ನೂ ನಾಮಕರಣ ಮಾಡಲಾಗಿತ್ತು. ಆ ಕಾರ್ಯಕ್ರಮವೂ ಈಚೆಗಷ್ಟೇ ನಡೆದಿತ್ತು. ಇಷ್ಟೆಲ್ಲಾ ಸಂಭ್ರಮದ ಮಧ್ಯೆ ಪತಿಗೆ ತನ್ನ ಪತ್ನಿಯ ಮೇಲೆ ಅನುಮಾನವಿತ್ತು.

ಆಕೆ ಇನ್ನೊಬ್ಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿ ಜೊತೆ ಜಗಳ ಕಾಯುತ್ತಿದ್ದನಂತೆ. ದಿನಂಪ್ರತಿ ನಡೆಯುತ್ತಿದ್ದ ಈ ಜಗಳ ಫೆಬ್ರವರಿ 19 ರಂದು ಅತಿರೇಕಕ್ಕೆ ತಿರುಗಿತ್ತು. ತನ್ನ ಶೀಲ ಶಂಕಿಸುತ್ತಿದ್ದ ಪತಿಯ ಮೇಲೆ ಮಹಿಳೆ ತೀವ್ರ ಕೋಪಗೊಂಡಿದ್ದಳು. ಇಬ್ಬರ ನಡೆದ ಜಗಳವೂ ನಡೆದಿತ್ತು. ಇದೇ ಕೋಪದಲ್ಲಿದ್ದ ಆಕೆ, ತನ್ನ 5 ತಿಂಗಳ ಕಂದಮ್ಮನ ಮೇಲೆ ಆ ಕೋಪ ತೀರಿಸಿಕೊಂಡಿದ್ದಳು. ಹಸುಳೆಯನ್ನು ಹೊಡೆದು ಕೋಪದ ಭರದಲ್ಲಿ ಕತ್ತು ಹಿಸುಕಿ ಕೊಂದು ಮನೆಯ ಪಕ್ಕದಲ್ಲಿದ್ದ ಬಾವಿಗೆ ಬಿಸಾಡಿದ್ದಳು.

ದೂರು ದಾಖಲಿಸಿಕೊಂಡ ಪೊಲೀಸರು ಅನುಮಾನ ಬಂದವರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ತಾಯಿಯನ್ನೂ ವಿಚಾರಿಸಿದ್ದಾರೆ. ಪತಿ ಪತ್ನಿಯರ ಮಧ್ಯೆ ಜಗಳವೂ ನಡೆದಿ ಕಾರಣ ಈಕೆಯ ಮೇಲೆ ಪೊಲೀಸರು ಅನುಮಾನಪಟ್ಟಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಕ್ರೂರಿ ತಾಯಿ ಮಾಡಿದ ಅನಾಗರಿಕ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಳು.

ಇದನ್ನೂ ಓದಿ: ಗಂಡ ಹೆಂಡತಿಯ ಜಗಳದಲ್ಲಿ ಕೂಸು 'ಬಲಿ': ಹೆತ್ತ ಮಗುವನ್ನೇ ಕೊಂದ ತಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.