ETV Bharat / state

ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಅಳವಡಿಕೆ ಬಗ್ಗೆ ನಂಗೆ ಗೊತ್ತಿಲ್ಲ: ಬಿ.ಸಿ. ನಾಗೇಶ್

ಈ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡುವಂತಹ ಪ್ರಯತ್ನ ಮಾಡಲ್ಲ. ಹಿಂದೆ ಇದೇ ತರಹದ ಊಹಾಪೋಹಗಳನ್ನು ನಾವು ನೋಡಿದ್ವಿ. ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದುಹಾಕಿದ್ದಾರೆ, ಹಾಗೆ ಮಾಡುತ್ತಿದ್ದಾರೆ, ಹೀಗೆ ಮಾಡುತ್ತಿದ್ದಾರೆ ಎಂಬೆಲ್ಲಾ ಮಾತುಗಳನ್ನು ಆಡುತ್ತಿದ್ದರು. ಅದೇ ಜನ ಇವತ್ತು ಇದನ್ನು ಹೇಳ್ತಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಅಳವಡಿಕೆ   ಬಗ್ಗೆ ನಂಗೆ ಗೊತ್ತಿಲ್ಲ ಎಂದ ಬಿ ಸಿ ನಾಗೇಶ್

author img

By

Published : May 16, 2022, 8:18 PM IST

Updated : May 16, 2022, 8:37 PM IST

ತುಮಕೂರು: ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಹೆಡ್ಗೆವಾರ್​ ಹೇಳಿಕೆ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಂಗೆ ಪೂರ್ಣ ವಿಚಾರ ಗೊತ್ತಿಲ್ಲ, ಪಠ್ಯ ಪುಸ್ತಕದ ಸಮಿತಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ವಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಅನೇಕ ಶಿಕ್ಷಣ ತಜ್ಞರಿದ್ದರು. ಅವರು ಮಾಡಿರುವುದನ್ನು ನಮ್ಮ ಶಿಕ್ಷಣ ಇಲಾಖೆ ಪರಿಗಣಿಸಿದೆ. ಯಾವುದು ಇರಬೇಕು, ಯಾವುದು ಇರಬಾರದು ಎಂಬುದನ್ನ ಪರಿಶೀಲಿಸಲಾಗುವುದು ಎಂದರು.

ಈ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡುವಂತಹ ಪ್ರಯತ್ನ ಮಾಡಲ್ಲ. ಹಿಂದೆ ಇದೇ ತರಹದ ಊಹಾಪೋಹಗಳನ್ನು ನಾವು ನೋಡಿದ್ವಿ. ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆದುಹಾಕಿದ್ದಾರೆ, ಹಾಗೆ ಮಾಡುತ್ತಿದ್ದಾರೆ, ಹೀಗೆ ಮಾಡುತ್ತಿದ್ದಾರೆ ಎಂಬೆಲ್ಲಾ ಮಾತುಗಳನ್ನು ಕೆಲವರು ಆಡುತ್ತಿದ್ದರು. ಅದೇ ಜನ ಇವತ್ತು ಇದನ್ನು ಹೇಳ್ತಿದ್ದಾರೆ. ಯಾವುದೇ ರೀತಿಯಲ್ಲಿಯೂ ಮಕ್ಕಳಿಗೆ ಹೇಳಬಾರದ ಒಂದೇ ಒಂದು ಲೈನ್ ಪಠ್ಯ ಪುಸ್ತಕದಲ್ಲಿ ಇಲ್ಲ ಅನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.

ಹೆಡ್ಗೆವಾರ್​ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಿಲ್ಲ. ಅವರ ಭಾಷಣದ ಒಂದು ತುಣುಕನ್ನ ಪಠ್ಯದಲ್ಲಿ ಸೇರಿಸಲಾಗಿದೆ. ಇವತ್ತು ದುಡ್ಡಿರುವಂತಹವರು ಆದರ್ಶ ಪುರುಷರಾಗಿದ್ದಾರೆ. ಆದರ್ಶ ವಿಷಯಕ್ಕೆ ಬಂದರೆ ವ್ಯಕ್ತಿ ಆದರ್ಶವಲ್ಲ, ವ್ಯಕ್ತಿತ್ವ ಆದರ್ಶವಾಗಿರುತ್ತದೆ ಎಂದು ಹೇಳಿದರು.

ಪಠ್ಯ ಪುಸ್ತಕದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆ ಅಳವಡಿಕೆ ಬಗ್ಗೆ ನಂಗೆ ಗೊತ್ತಿಲ್ಲ

ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಮಕ್ಕಳು ದುರಾದೃಷ್ಟವಂತರು ಅಂತಾ ನಂಗೆ ಅನ್ಸುತ್ತೆ. ಪಾಪ ಯಾರಿಂದಲೋ ಮತ್ತೆ ಮತ್ತೆ ಪ್ರೇರಣೆ ಪಡೆದುಕೊಂಡು ತಮ್ಮ ಶಿಕ್ಷಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲವೇ ಮಕ್ಕಳಿಗೋಸ್ಕರ ಸರ್ಕಾರಿ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ತಲಾಶ್​

Last Updated : May 16, 2022, 8:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.