ತುಮಕೂರು: ನನ್ನನ್ನು ಯಾವ ಕಾಂಗ್ರೆಸ್ನವರೂ ಪಕ್ಷಕ್ಕೂ ಬರುವಂತೆ ಕರೆದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಬಂದು ಚಿಕ್ಕನಾಯಕನಹಳ್ಳಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಸಂತೋಷಪಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದೇವೇಗೌಡರು ಬಂದು ತುಮಕೂರಿನಲ್ಲಿ ಕಣಕ್ಕಿಳಿದಿದ್ದರು. ಸುಮಾರು ಮೂವತ್ತು ವರ್ಷದಿಂದ ರಾಜಕಾರಣ ಮಾಡಿದ್ದೇವೆ. ಯಾರೋ ಬಂದು ಚುನಾವಣೆಗೆ ಸ್ಪರ್ಧಿಸಿದರೆ ನಾವು ಸುಮ್ಮನಿರಲು ಸಾಧ್ಯವೇ? ಎಂದರು.
ನಾವು ಚುನಾವಣೆಗೆ ನಿಲ್ಲಬೇಕು, ನಿಲ್ಲುತ್ತೇವೆ. ಯಾರು ಬರ್ತಾರೋ ಗೊತ್ತಿಲ್ಲ, ಸಿದ್ದರಾಮಯ್ಯನವರನ್ನು ಬರಬೇಡಿ ಎನ್ನಲಾಗುತ್ತದೆಯೇ?, ದೇವೇಗೌಡರನ್ನು ಬರಬೇಡಿ ಎಂದು ಹೇಳಿದ್ವಾ? ಎಂದು ಹೇಳಿದರು.