ETV Bharat / state

ತುಮಕೂರಿನಲ್ಲಿ ಸೃಷ್ಟಿಯಾಗುತ್ತಿದೆ ಪವಿತ್ರ ಕ್ಷೇತ್ರ... ಕೋಟಿಲಿಂಗೇಶ್ವರ ಕ್ಷೇತ್ರವೇ ಪ್ರೇರಣೆ!

ವಿವಿಧ ಸ್ವರೂಪದ ಸುಮಾರು 12,000 ಶಿವಲಿಂಗಗಳನ್ನು ಈಗಾಗಲೇ ಪ್ರತಿಷ್ಠಾಪನೆ ಮಾಡಿದ್ದಾರೆ. ಭಕ್ತರು ಕೂಡ ತಾವು ಬಯಸಿದಂತೆ ಇಲ್ಲಿ ಬಂದು ಶಿವಲಿಂಗದ ಪ್ರತಿಮೆಗಳನ್ನು ಇರಿಸಬಹುದಾಗಿದೆ.

ತುಮಕೂರಿನಲ್ಲೊಂದು ಪವಿತ್ರ ಕ್ಷೇತ್ರ
author img

By

Published : May 15, 2019, 5:45 AM IST

ತುಮಕೂರು: ಕೋಲಾರ ಜಿಲ್ಲೆಯಲ್ಲಿರುವ ಕೋಟಿಲಿಂಗೇಶ್ವರ ಮಾದರಿಯಲ್ಲಿ ಪವಿತ್ರ ಕ್ಷೇತ್ರವೊಂದು ತುಮಕೂರು ಜಿಲ್ಲೆಯಲ್ಲಿ ನಿಧಾನವಾಗಿ ತಲೆ ಎತ್ತುತ್ತಿದೆ.

ಹೌದು, ಕೋಟಿಲಿಂಗೇಶ್ವರ ರೀತಿಯಾದ ಒಂದು ಕ್ಷೇತ್ರವನ್ನು ರೂಪಿಸಬೇಕೆಂಬ ಸಂಕಲ್ಪ ಹೊಂದಿದೆ ಭ್ರಮರಾಂಭ ಕುಟುಂಬ. ಇವರು ನಗರದ ಎಸ್ಎಸ್ ಪುರಂ ನಿವಾಸಿಯಾಗಿರುವ ಭ್ರಮರಾಂಭ ಪತಿ ಮೃತರಾದ ನಂತರ ಹಲವು ಶಿವನ ದೇಗುಲಗಳಿಗೆ ಭೇಟಿ ನೀಡಿ ದರ್ಶನ ಮಾಡಿದ್ದರು. ಅದೇ ರೀತಿ ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ಕ್ಷೇತ್ರಕ್ಕೂ ಹೋಗಿ ದರ್ಶನ ಪಡೆದಿದ್ದರು.

ಕೋಟಿಲಿಂಗೇಶ್ವರ ದರ್ಶನದ ನಂತರ ಮನೆಗೆ ಬಂದಾಗ ಒಮ್ಮೆ ಕನಸಿನಲ್ಲಿ ಸಾಕಷ್ಟು ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಬೇಕಾಗಿದೆ ಎಂಬ ಒಂದು ಸಂದೇಶ ಬಂದಿತ್ತಂತೆ. ಅಂದಿನಿಂದ ಮನೆಯ ಕಾಂಪೌಂಡ್ ಒಳಗಡೆ ಅನೇಕ ಶಿವ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿದ್ದಾರೆ. ತಾಯಿಯ ಸಂಕಲ್ಪದಂತೆ ಮಗ ಪರಮೇಶ್ ಹಾಗೂ ಅವರ ಕುಟುಂಬ ಸೇರಿ ತುಮಕೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಾಟ ಮಾಡಿ, ಕೊರಟಗೆರೆಯಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದಾರೆ.

ತುಮಕೂರಿನಲ್ಲೊಂದು ಪವಿತ್ರ ಕ್ಷೇತ್ರ

ಖರೀದಿಸಿದ ಜಮೀನಿನಲ್ಲಿ ಬೃಹತ್ತಾದ ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅದೇ ರೀತಿ ವಿವಿಧ ಸ್ವರೂಪದ ಸುಮಾರು 12,000 ಶಿವಲಿಂಗಗಳನ್ನು ಈಗಾಗಲೇ ಪ್ರತಿಷ್ಠಾಪನೆ ಮಾಡಿದ್ದಾರೆ. ಭಕ್ತರು ಕೂಡ ತಾವು ಬಯಸಿದಂತೆ ಇಲ್ಲಿ ಬಂದು ಶಿವಲಿಂಗದ ಪ್ರತಿಮೆಗಳನ್ನು ಇರಿಸಬಹುದಾಗಿದೆ. ಈ ಕ್ಷೇತ್ರದ ಕುರಿತಂತೆ ಯಾವುದೇ ರೀತಿಯ ಪ್ರಚಾರವನ್ನು ನಾವು ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಭಕ್ತರೇ ಬಂದು ಇಲ್ಲಿ ಶಿವಲಿಂಗಗಳ ದರ್ಶನ ಪಡೆಯಬಹುದು ಎನ್ನುತ್ತಾರೆ ಭ್ರಮರಾಂಭ ಅವರ ಮಗ ಪರಮೇಶ್.

ಈ ಕ್ಷೇತ್ರದಲ್ಲಿ 150 ಅಡಿ ಎತ್ತರದ ಬೃಹತ್ ಶಿವಲಿಂಗವನ್ನು ಮುಂದಿನ ದಿನಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬ ಸಂಕಲ್ಪವನ್ನು ತೊಟ್ಟಿದೆ ಈ ಕುಟುಂಬ. ಒಟ್ಟಾರೆ ತಾಯಿಯ ಆಸೆಯಂತೆ ಮಕ್ಕಳು ಈ ರೀತಿಯಾದ ಒಂದು ಕ್ಷೇತ್ರವನ್ನು ನಿರ್ಮಿಸಲು ಮುಂದಾಗಿರುವುದು ಅಚ್ಚರಿ ಎಂದೇ ಹೇಳಬಹುದಾಗಿದೆ.

Intro:ಕೋಟಿಲಿಂಗೇಶ್ವರ ಕ್ಷೇತ್ರ ಮಾದರಿಯಲ್ಲಿ ರೂಪುಗೊಳ್ಳುತ್ತದೆ ತುಮಕೂರಿನಲ್ಲೊಂದು ಕ್ಷೇತ್ರ......

ತುಮಕೂರು
ಕೋಲಾರ ಜಿಲ್ಲೆಯಲ್ಲಿರುವ ಮಾದರಿಯಲ್ಲಿ ಕೋಟಿಲಿಂಗೇಶ್ವರ ಕ್ಷೇತ್ರವೊಂದು ನಿಧಾನವಾಗಿ ತುಮಕೂರು ಜಿಲ್ಲೆಯಲ್ಲಿ ತಲೆಯೆತ್ತುತ್ತದೆ. ಈ ರೀತಿಯಾದ ಒಂದು ಕ್ಷೇತ್ರವನ್ನು ರೂಪಿಸಬೇಕೆಂಬ ಸಂಕಲ್ಪ ಹೊಂದಿದೆ ಕುಟುಂಬ.

ಇವರು ಭ್ರಮರಾಂಬ ತುಮಕೂರು ನಗರದ ಎಸ್ ಎಸ್ ಪುರಂ ನಿವಾಸಿ. ಆಯುರ್ವೇದಿಕ್ ವೈದ್ಯರಾಗಿದ್ದ ಅಂತಹ ಇವರ ಪತಿ ಮೃತರಾದ ನಂತರ ಇವರು ಹಲವು ಶಿವನ ದೇಗುಲಗಳಿಗೆ ಭೇಟಿ ನೀಡಿ ದರ್ಶನ ಮಾಡಿದ್ದರು. ಅದೇ ರೀತಿ ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ಕ್ಷೇತ್ರಕ್ಕೂ ಹೋಗಿ ದರ್ಶನ ಪಡೆದಿದ್ದರು. ವಾಪಸ್ ಮನೆಗೆ ಬಂದಾಗ ಒಮ್ಮೆ ಕನಸಿನಲ್ಲಿ ಸಾಕಷ್ಟು ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಬೇಕಾಗಿದೆ ಎಂಬ ಒಂದು ಸಂದೇಶ ಬಂದಿತ್ತಂತೆ. ಅಂದಿನಿಂದ ಮನೆಯ ಕಾಂಪೌಂಡ್ ಒಳಗಡೆ ಅನೇಕ ಶಿವ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತ ಬಂದಿದ್ದರು. ಹೀಗಾಗಿ ತಾಯಿಯ ಸಂಕಲ್ಪದಂತೆ ಮಗ ಪರಮೇಶ್ ಅವರು ಹಾಗೂ ಅವರ ಕುಟುಂಬ ಎಲ್ಲರೂ ಸೇರಿ ತುಮಕೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಾಟ ಮಾಡಿದ್ದಾರೆ. ಕೊರಟಗೆರೆಯಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದಾರೆ. ಅಲ್ಲಿ ಬೃಹತ್ತಾದ ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅದೇ ರೀತಿ ವಿವಿಧ ಸ್ವರೂಪದ ಸುಮಾರು 12,000 ಶಿವ ಲಿಂಗಗಳನ್ನು ಈಗಾಗಲೇ ಪ್ರತಿಷ್ಠಾಪನೆ ಮಾಡಿದ್ದಾರೆ.
ಭಕ್ತರು ಕೂಡ ತಾವು ಬಯಸಿದಂತೆ ಇಲ್ಲಿ ಬಂದು ಶಿವಲಿಂಗದ ಪ್ರತಿಮೆಗಳನ್ನು ಇರಿಸಬಹುದು. ಈ ಕ್ಷೇತ್ರದ ಕುರಿತಂತೆ ಯಾವುದೇ ರೀತಿಯ ಪ್ರಚಾರ ನಾವು ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ ಭಕ್ತರೇ ಬಂದು ಇಲ್ಲಿ ಶಿವಲಿಂಗಗಳನ್ನು ತಿಳಿಸಬಹುದಾಗಿದೆ ಎನ್ನುತ್ತಾರೆ ಬ್ರಮರಾಂಬ ಅವರ ಮಗ ಪರಮೇಶ್.

ಈ ಕ್ಷೇತ್ರದಲ್ಲಿ 150 ಅಡಿ ಎತ್ತರದ ಬೃಹತ್ ಶಿವಲಿಂಗವನ್ನು ಮುಂದಿನ ದಿನಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬ ಸಂಕಲ್ಪವನ್ನು ತೊಟ್ಟಿದೆ ಈ ಕುಟುಂಬ. ಒಟ್ಟಾರೆ ತಾಯಿಯ ಆಸೆಯಂತೆ ಮಕ್ಕಳು ಈ ರೀತಿಯಾದ ಒಂದು ಕ್ಷೇತ್ರವನ್ನು ನಿರ್ಮಿಸಲು ಮುಂದಾಗಿರುವುದು ಅಚ್ಚರಿ ಎಂದೇ ಹೇಳಬಹುದಾಗಿದೆ.

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.