ತುಮಕೂರು: ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ ಐವರು ಶಿಕ್ಷಕರು ಮೃತಪಟ್ಟಿದ್ದು, ಇವರೆಲ್ಲರಿಗೂ 50 ವರ್ಷ ಮೀರಿಲ್ಲ ಎಂಬುದು ಆತಂಕ ತರುವ ವಿಷಯವಾಗಿದೆ.
ಜಿಲ್ಲಾ ವಿಭಾಗದಲ್ಲಿ ನಾಲ್ವರು ಶಿಕ್ಷಕರು ಮೃತಪಟ್ಟಿದ್ದು, ಅವರೆಲ್ಲರೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ. ಈ ಮೊದಲು 106 ಮಂದಿ ಶಿಕ್ಷಕರಿಗೆ ಸೋಂಕು ತಗುಲಿತ್ತು. ಇವರಲ್ಲಿ 70 ಮಂದಿ ಗುಣಮುಖರಾಗಿದ್ದಾರೆ. ಇನ್ನು 36 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದು, ಗುಣಮುಖರಾಗಿರುವ 70 ಶಿಕ್ಷಕರು ಈಗಾಗಲೇ ವಿದ್ಯಾಗಮ ಯೋಜನೆಯ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ.
ಅನೇಕ ಶಿಕ್ಷಕರು ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ರಜೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಸೋಂಕಿನ ಪ್ರಾಥಮಿಕ ಸಂಪರ್ಕಿತರಿಗೆ 7 ದಿನ, ಚಿಕಿತ್ಸೆ ಪಡೆಯಲು 14 ದಿನ ರಜೆ ನೀಡಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಡಿಡಿಪಿಐ ನಂಜಯ್ಯ ತಿಳಿಸಿದ್ದಾರೆ.