ತುಮಕೂರು: ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂಬ ಶಾಸಕ ಜಮೀರ್ ಅಹ್ಮದ್ ಅವರ ಹೇಳಿಕೆ ಬಗ್ಗೆ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಅದು ಜಮೀರ್ ಅವರ ವೈಯುಕ್ತಿಕ ಅಭಿಪ್ರಾಯ ಎಂದು ಸಿದ್ದರಾಮಯ್ಯನವರು ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ತೀರ್ಮಾನವೇ ಅಂತಿಮ ಎಂದರು.
ನಮ್ಮ ಜೊತೆಗಿರುವ ಬೆಂಬಲಿಗರಿಗೆ ನಮ್ಮ ನಾಯಕರು ಹೀಗೆ ಆಗ್ಬೇಕು, ಹಾಗೆ ಆಗ್ಬೇಕು ಎಂಬ ಆಸೆಗಳಿರುತ್ತವೆ. ಜಮೀರ್ ಸಿದ್ದರಾಮಯ್ಯನವರ ಜೊತೆಗಿರುವುದರಿಂದ ಅವರಿಗೆ ಹಲವು ಆಸೆಗಳಿರಬಹುದು. ನನ್ನ ಬೆಂಬಲಿಗರಿಗೆ ನಾನು ಸಿಎಂ ಆಗ್ಬೇಕೆಂಬ ಆಸೆ ಇರಬಹುದು. ಆದರೆ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರತಿಯೊಬ್ಬ ಕಾರ್ಯಕರ್ತನ ಮೊದಲ ಆದ್ಯತೆಯಾಗಬೇಕು ಎಂದರು.
ಬಿಜೆಪಿಯವರು ಕೆಟ್ಟ ಆಡಳಿತ ಕೊಟ್ಟಿದ್ದಾರೆ, ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಮ್ಮಲ್ಲಿ ಪಕ್ಷದ ವಿಷಯ ಬಂದಾಗ ರಾಜ್ಯಾಧ್ಯಕ್ಷರೇ ಸುಪ್ರೀಂ. ಡಿ.ಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಅಧಿಕಾರ ಕೊಟ್ಟಿದೆ. ಅವರು ಹೇಗೆ ಹೇಳ್ತಾರೋ ಹಾಗೆ ಕೇಳಬೇಕು. ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮಟ್ಟಕ್ಕೆ ಏನೂ ಸಮಸ್ಯೆಯಾಗಿಲ್ಲ. ನಮ್ಮಲ್ಲಿ ಬಣ ರಾಜಕೀಯವಿಲ್ಲ. ಆ ರೀತಿ ಏನಾದ್ರು ಇದ್ದರೆ, ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲ ಸರಿಪಡಿಸುತ್ತಾರೆ ಎಂದು ಹೇಳಿದರು.