ETV Bharat / state

ತುಮಕೂರು ಜಿಲ್ಲೆಯಲ್ಲಿ ಮುಕ್ತ ಶಾಂತಿಯುತ ಮತದಾನಕ್ಕೆ ಸರ್ವಸಿದ್ಧತೆ.. - ವಿಧಾನಸಭೆ ಸಾರ್ವತ್ರಿಕ ಚುನಾವಣೆ

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತದಿಂದ ಸರ್ವಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

prepared peaceful polling process
ಶಾಂತಿಯುತ ಮತದಾನ ಪ್ರಕ್ರಿಯೆಗೆ ತುಮಕೂರು ಜಿಲ್ಲಾಡಳಿತ ಸರ್ವಸಿದ್ಧತೆ
author img

By

Published : May 9, 2023, 5:50 PM IST

ತುಮಕೂರು ಜಿಲ್ಲೆಯಲ್ಲಿ ಮುಕ್ತ ಶಾಂತಿಯುತ ಮತದಾನಕ್ಕೆ ಸರ್ವಸಿದ್ಧತೆ

ತುಮಕೂರು: ಜಿಲ್ಲೆಯ 11 ವಿಧಾನಸಭೆ ಕ್ಷೇತ್ರಗಳಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಕ್ತ ಹಾಗೂ ಶಾಂತಿಯುತ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಸರ್ವಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆ ಮತಗಟ್ಟೆಗಳಿಗೆ ಇವಿಎಂಗಳ ರವಾನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಜಿಲ್ಲೆಯಲ್ಲಿ 2683 ಮತಗಟ್ಟೆ, 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿ.. ಜಿಲ್ಲೆಯ ಒಟ್ಟು 11 ವಿಧಾನಸಭೆ ಕ್ಷೇತ್ರಗಳಲ್ಲಿ 2683 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ತುಮಕೂರು ನಗರದ ಜ್ಯೂನಿಯರ್ ಕಾಲೇಜು ಸೇರಿದಂತೆ ಆಯಾ ತಾಲೂಕು ಕೇಂದ್ರದಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 11,644 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 564 ಬಸ್​​ಗಳಲ್ಲಿ ಮತಗಟ್ಟೆಗಳಿಗೆ ಇವಿಎಂಗಳ ರವಾನೆ ಮಾಡಲಾಗುತ್ತಿದ್ದು ತಯಾರಿ ಭರದಿಂದ ಸಾಗಿದೆ.

ಚುನಾವಣೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣೆ ಅಧಿಕಾರಿ ವೈ ಎಸ್ ಪಾಟೀಲ್, ಮೇ 10 ( ಬುಧವಾರ) ನಡೆಯುವ ಮತದಾನಕ್ಕೆ ಜಿಲ್ಲಾಡಳಿತ ಸನ್ನದ್ಧವಾಗಿದೆ. 48 ಸಾವಿರದಷ್ಟು ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 22,47,932 ಮತದಾರರು ಜಿಲ್ಲೆಯಲ್ಲಿ ಇದ್ದಾರೆ ಎಂದು ಹೇಳಿದ್ರು.

2683 ಮತಗಟ್ಟೆಗಳಲ್ಲಿ 545 ಮತಗಟ್ಟೆ ಸೂಕ್ಷ್ಮ, ಅತಿ ಸೂಕ್ಷ್ಮ: 325 ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ. 545 ಮತಗಟ್ಟೆಗಳನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 2683 ಮತಗಟ್ಟೆಗಳಿವೆ ಅದರಲ್ಲಿ 1363 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ.

ಜಿಲ್ಲಾಮಟ್ಟದಲ್ಲಿ ವಾರ್​ರೂಮ್ ತೆರೆಯಲಾಗಿದೆ. ವಾರ್​​ರೂಮ್ ನಿಂದಲ್ಲೇ ನಿರ್ದೇಶನ ನೀಡಲಾಗುತ್ತದೆ. 12093 ಸಿಬ್ಬಂದಿಗಳನ್ನು ಮತದಾನದ ಪ್ರಕ್ರಿಯೆಗೆ ನೇಮಕ ಮಾಡಲಾಗಿದೆ. ಸಿಬ್ಬಂದಿ ಮತಗಟ್ಟೆಗೆ ತೆರಳಲು 564 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿವಿಎಂ ಮತ್ತು ವಿವಿಪ್ಯಾಡ್ ಗಳನ್ನು ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

5 ಕೋಟಿ 47 ಲಕ್ಷ ನಗದು, ಮದ್ಯ ಸೀಜ್: 5 ಕೋಟಿ 47 ಲಕ್ಷ ಮೌಲ್ಯದ ಹಣ ಹಾಗೂ ಮದ್ಯವನ್ನು ಸೀಜ್ ಮಾಡಲಾಗಿದೆ. ಅಕ್ರಮಗಳಲ್ಲಿ ಭಾಗಿಯಾಗಿದವರ ವಿರುದ್ಧ 66 ದೂರುಗಳು ದಾಖಲಾಗಿವೆ. 9121 ಜನರು ಮನೆ ಮತದಾನ ಮಾಡಿದ್ದಾರೆ (ವಿಶೇಷ ಚೇತನ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು) ಎಂದು ತಿಳಿಸಿದರು.

20448 ಅಂಚೆ ಮತದಾನವಾಗಿದೆ. ಮಸ್ಟರಿಂಗ್​ ಹಾಗೂ ಡಿಮಸ್ಟ್ರಿಂಗ್ ತಾಲೂಕು ಕೇಂದ್ರಗಳಲ್ಲಿ ನಡೆದಿದೆ. 3500 ಪೊಲೀಸ್ ಸಿಬ್ಬಂದಿ ಭದ್ರತೆಗೆ ಬಳಸಿಕೊಳ್ಳಲಾಗಿದೆ. ಸೂಕ್ಷ್ಮ‌ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಎಫ್‌ ಪಿಎಫ್ ಭದ್ರತೆ ನೀಡಲಾಗಿದೆ. 232 ಸೆಕ್ಟರ್ ಆಫೀಸರ್ ನೇಮಕ ಪ್ರತಿ ಸೆಕ್ಟರ್ ಆಫೀಸರ್ ಗೆ 10-18 ಮತಗಟ್ಟೆಗಳನ್ನು ಉಸ್ತುವಾರಿ ನೀಡಲಾಗಿದೆ. ಇವರಿಗೆ ಆರ್ಮಡ್ ವೆಹಿಕಲ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು.

ಇದನ್ನೂಓದಿ:ಕರ್ನಾಟಕ ಚುನಾವಣೆಗೆ ಮತ ಹಾಕಲು ವೇತನಸಹಿತ ರಜೆ ನೀಡಿದ ಗೋವಾ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.