ETV Bharat / state

ತುಮಕೂರು: ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು! - ಈಟಿವಿ ಭಾರತ ಕನ್ನಡ

ತುಮಕೂರಿನಲ್ಲಿ ಹಸುವೊಂದು 3 ಗಂಡು, 1 ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.

ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು
ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು
author img

By

Published : Jul 4, 2023, 9:12 AM IST

Updated : Jul 4, 2023, 2:44 PM IST

ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು

ತುಮಕೂರು: ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹಟ್ಟಿಯಲ್ಲಿ ನಡೆದಿದೆ. ಮುನಿಯಪ್ಪ ಮತ್ತು ಕರಿಯಮ್ಮ ಎಂಬವರಿಗೆ ಸೇರಿದ ಈ ಹಸು 3 ಗಂಡು ಮತ್ತು 1 ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚೇಳೂರು ಪಶು ವೈದ್ಯಾಧಿಕಾರಿ ಡಾ. ಶಂಕರಪ್ಪ ತಪಾಸಣೆ ನಡೆಸಿದರು. ಒಂದು ಗಂಡು ಕರು ಹುಟ್ಟಿದ ತಕ್ಷಣ ಮೃತಪಟ್ಟಿದೆ. ಮೂರು ಕರುಗಳು ಆರೋಗ್ಯವಾಗಿವೆ ಎಂದು ಅವರು ತಿಳಿಸಿದರು.

ಗದಗ್‌​ನಲ್ಲೂ ಇಂಥದ್ದೇ ಘಟನೆ : ಕೆಲವು ದಿನಗಳ ಹಿಂದೆ ಗದಗ ಜಿಲ್ಲೆಯಲ್ಲೂ ಹಸುವೊಂದು ಮೂರು ಕರುಗಳಿಗೆ ಜನ್ಮ ಕಟ್ಟಿತ್ತು. ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಖಾದೀರ್‌ ಸಾಬ್ ನದಾಫ್ ಎಂಬ ರೈತನ ಹಸು ತ್ರಿವಳಿ ಕರುಗಳನ್ನು ಹಾಕಿತ್ತು. ಲಕ್ಷ್ಮೀ ಎಂಬ ಹೆಸರಿನ ಜರ್ಸಿ ತಳಿ ಇದು.

ಚಿತ್ರದುರ್ಗದ ಘಟನೆ : ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಮಲ್ಲಪ್ಪನಹಳ್ಳಿಯಲ್ಲಿ ಹಸುವೊಂದು ಮೂರು ಹೆಣ್ಣು ಕರುಗಳಿಗೆ ಇತ್ತೀಚೆಗೆ ಜನ್ಮ ನೀಡಿತ್ತು. ಮಲ್ಲಪ್ಪನಹಳ್ಳಿ ಗ್ರಾಮದ ಮೂರ್ಕಣಪ್ಪ ಎಂಬವರಿಗೆ ಸೇರಿದ ಹಸು ಇದಾಗಿತ್ತು. ಮೂರು ಕರುಗಳು ಒಂದೇ ದಿನ 5 ನಿಮಿಷಗಳ ಕಾಲಾವಧಿಯಲ್ಲಿ ಹುಟ್ಟಿದ್ದವು.

ರಾಮನಗರದಲ್ಲಿ 3 ಕರುಗಳಿಗೆ ಜನ್ಮ ನೀಡಿದ ಹಸು : ಇಲ್ಲಿಯ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ‌ ಕೊಟ್ಟಿತ್ತು. ಶೇಖರ್ ಎಂಬವರು ತಮ್ಮ ಮನೆಯಲ್ಲಿ ಸಾಕಿದ್ದ ಸೀಮೆ ಹಸು 2 ಗಂಡು ಮತ್ತು ಒಂದು ಹೆಣ್ಣು ಕರು ಹಾಕಿತ್ತು. ಮೂರು ಕರುಗಳ ಪೈಕಿ ಎರಡು ಗಂಡು ಕರುಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದವು. ಹೆಣ್ಣು ಕರು ಆರೋಗ್ಯವಾಗಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ. ತಾಲೂಕಿನ ಆನಗಟ್ಟಿ ಗ್ರಾಮದಲ್ಲಿ ಹಸುವೊಂದು 3 ಕರುಗಳಿಗೆ ಜನ್ಮ ನೀಡಿತ್ತು. ಮುದ್ದಣ ಎಂಬವರಿಗೆ ಸೇರಿದ್ದ ಹಸು 3 ಕರುಗಳಿಗೆ ಜನ್ಮ‌ನೀಡಿತ್ತು. 2 ಕರುಗಳು ಹುಟ್ಟಿದ 10 ನಿಮಿಷಗಳಲ್ಲಿ‌ ಸಾವನ್ನಪ್ಪಿದ್ದವು. ಇನ್ನೊಂದು ಕರು ಆರೋಗ್ಯಕರವಾಗಿದೆ.

ಇದನ್ನೂ ಓದಿ: ಎರಡು ತಲೆ ಇರುವ ಕರುವಿಗೆ ಜನ್ಮ ನೀಡಿದ ಹಸು: ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು

Last Updated : Jul 4, 2023, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.