ETV Bharat / state

ತಾಯಿ ಕಲಿತ ಸರ್ಕಾರಿ ಶಾಲೆಗೆ ₹2 ಕೋಟಿ ವ್ಯಯಿಸಿ ಹೈಟೆಕ್‌ ಸ್ಪರ್ಶ ನೀಡಿದ ಉದ್ಯಮಿ

ಈ ಉದ್ಯಮಿಯ ತಾಯಿ ತುಮಕೂರು ತಾಲೂಕಿನ ಕೋರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಈ ನೆನಪಿಗಾಗಿ 2 ಕೋಟಿ ರೂ. ವೆಚ್ಚಮಾಡಿ ಹೈಟೆಕ್ ಶಾಲಾ ಕಟ್ಟಡ ಹಾಗೂ ಮೂಲಭೂತ ಸೌಕರ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.

ತುಮಕೂರಲ್ಲಿ ತನ್ನ ತಾಯಿ ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿಸಿದ ಉದ್ಯಮಿ!

author img

By

Published : Apr 22, 2022, 7:04 PM IST

Updated : Apr 22, 2022, 8:11 PM IST

ತುಮಕೂರು: ತನ್ನ ತಾಯಿ ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಉದ್ಯಮಿಯೊಬ್ಬರು ಪರಿವರ್ತಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಹರ್ಷ ಇಂತಹದ್ದೊಂದು ಒಳ್ಳೆಯ ಕಾರ್ಯ ಕೈಗೊಂಡು ಮಾದರಿಯಾಗಿದ್ದಾರೆ.

ತಮ್ಮ ತಾಯಿ ಸರ್ವಮಂಗಳಾ ನಾಗಯ್ಯ ಅವರು ತುಮಕೂರು ತಾಲೂಕಿನ ಕೋರಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಈ ನೆನಪಿಗಾಗಿ ಹರ್ಷ ಅವರು 2 ಕೋಟಿ ರೂ. ವೆಚ್ಚಮಾಡಿ ಹೈಟೆಕ್ ಶಾಲಾ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. 14 ಕೊಠಡಿಗಳ ಸುಸಜ್ಜಿತ ಕಟ್ಟಡ ಇದಾಗಿದೆ.

ಮೂಲತಃ ಹುಬ್ಬಳ್ಳಿ ಮೂಲದವರಾದ ಈ ಉದ್ಯಮಿ, ಒಮ್ಮೆ ತಮ್ಮ ಉದ್ಯಮದ ಸ್ಥಳವಾದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕೋರಾ ಕೋರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ತಾಯಿಯ ತವರುಮನೆ ಎಂಬ ಅಭಿಮಾನದಿಂದ ಭೇಟಿ ನೀಡಿದಾಗ ಅದರಲ್ಲೂ ತಾಯಿ ಓದಿದ ಶಾಲೆಗೆ ತೆರಳಿ ವೀಕ್ಷಿಸಿದ್ದಾರೆ. ಊರ ಮೊಮ್ಮಗ ಹರ್ಷ ಇಲ್ಲಿಗೆ ಕಾಲಿಟ್ಟಾಗ ಶಾಲೆಯ ಭಾಗಶಃ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ದೃಷ್ಟಿಯಿಂದ ನೆಲಸಮಗೊಳಿಸಲಾಗಿತ್ತು. ಇದನ್ನು ಗಮನಿಸಿದ ಹರ್ಷ ತಮ್ಮ ತಾಯಿ ನೆನಪಿಗಾಗಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡಲು ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅಲ್ಲದೇ ಶಾಲೆಯಿಂದ ಅನತಿ ದೂರದಲ್ಲಿರುವ ಸರ್ಕಾರಿ ಜಾಗದಲ್ಲಿ 2 ಕೋಟಿ ರೂ. ಮೌಲ್ಯದ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ತಾಯಿ ಕಲಿತ ಸರ್ಕಾರಿ ಶಾಲೆಗೆ ₹2 ಕೋಟಿ ವ್ಯಯಿಸಿ ಹೈಟೆಕ್‌ ಸ್ಪರ್ಶ ನೀಡಿದ ಉದ್ಯಮಿ

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು

ಶಾಲೆಯಲ್ಲಿ ಏನೇನಿದೆ?: ಪ್ರಸ್ತುತ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಸ್ಮಾರ್ಟ್ ಕ್ಲಾಸ್ ಕೊಠಡಿ.. ಹೀಗೆ ಸಂಪೂರ್ಣ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಶಾಲಾ ಕಟ್ಟಡ ನಿರ್ಮಾಣ ಮಾಡಿದ ಹರ್ಷ ದಂಪತಿಗೆ ಕೋರ ಗ್ರಾಮಸ್ಥರು ಮನತುಂಬಿ ಹಾರೈಸಿ ಸನ್ಮಾನಿಸಿದ್ದಾರೆ.

Last Updated : Apr 22, 2022, 8:11 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.