ETV Bharat / state

ಯಲ್ಲೋ ಬೋರ್ಡ್ ಚಾಲಕರಿಗೆ ಆಂಧ್ರಪ್ರದೇಶ ಆರ್​ಟಿಒ ಕಾಟ ಆರೋಪ - Andhra Pradesh

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿಗೆ ಹೋಗಲು ಚಂದ್ರಭಾವಿ ಮತ್ತು ರಾಜವಂತಿ ಗಡಿ ಭಾಗದ ನಡುವೆ ಸರಿಸುಮಾರು 9 ಕಿಮೀ ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಹಾದುಹೋಗಬೇಕಾಗುತ್ತದೆ. ಆಂಧ್ರದ ಗಡಿಯಲ್ಲಿ ಆರ್​ಟಿಒಗಳು ಹಳದಿ ನಂಬರ್​ ಪ್ಲೇಟ್​ನ ವಾಹನಗಳು ಹೋದಾಗ ಅಂತಾರಾಜ್ಯ ಫರ್ಮಿಟ್​ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ಇದರಿಂದ ಒಂದೇ ಜಿಲ್ಲೆಯ ಇನ್ನೂಂದು ತಾಲೂಕಿಗೆ ಓಡಾಟ ಕಷ್ಟವಾಗುತ್ತಿದೆಯಂತೆ.

Trouble by Andhra RTO for Yellow Board Drivers
ಯಲ್ಲೋ ಬೋರ್ಡ್ ಚಾಲಕರಿಗೆ ಆಂಧ್ರ ಆರ್​ಟಿಒ ಕಾಟ
author img

By

Published : Mar 13, 2022, 4:24 PM IST

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿಗೆ ಹೋಗಬೇಕಾದರೆ ಆಂಧ್ರ ಪ್ರದೇಶದ ಮಡಕಶಿರಾ ತಾಲೂಕಿನ ಮೂಲಕ ಹಾದು ಹೋಗಲೇಬೇಕು. ಇದರಿಂದ ಅಂತಾರಾಜ್ಯ ಫರ್ಮಿಟ್​ ಹೊಂದಿಯೇ ಹಳದಿ ಬಣ್ಣದ ನಂಬರ್​ ವಾಹನಗಳು ಹೋಗಬೇಕು ಎಂದು ಆಧ್ರದ ಆರ್​ಟಿಒ ಇಲಾಖೆ ದಂಡ ವಸೂಲಿ ಮಾಡುತ್ತಿದೆಯಂತೆ.

ಯಲ್ಲೋ ಬೋರ್ಡ್ ಚಾಲಕರಿಗೆ ಆಂಧ್ರ ಆರ್​ಟಿಒ ಕಾಟ

ಪಾವಗಡಕ್ಕೆ ಹೋಗಬೇಕಾದರೆ ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಪ್ರವೇಶ ಮಾಡಿಯೇ ಹೋಗಬೇಕು. ಚಂದ್ರಭಾವಿ ಮತ್ತು ರಾಜವಂತಿ ಗಡಿ ಭಾಗದ ನಡುವೆ ಸರಿಸುಮಾರು 9 ಕಿ.ಮೀ. ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಹಾದುಹೋಗಬೇಕಾಗುತ್ತದೆ. ಈ ಅನಿವಾರ್ಯತೆಯೇ ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಸಂಕಷ್ಟಕ್ಕೆ ಕಾರಣವಾಗಿದೆ. ಗಡಿಯಲ್ಲಿ ಅಂತಾರಾಜ್ಯ ಫರ್ಮಿಟ್ ಇಲ್ಲದ ಹಳದಿ ಬೋರ್ಡ್​ನ ವಾಹನಗಳಿಗೆ ದಂಡ ವಿದಿಸುತ್ತಿದ್ದಾರೆ, ದಂಡ ಕಟ್ಟದ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

ಒಂದು ಒಪ್ಪಂದದ ಪ್ರಕಾರ ಆಂಧ್ರ ರಾಜ್ಯದೊಳಗೆ 16 ಕಿ.ಮೀ. ದೂರದವರೆಗೆ ಕರ್ನಾಟಕದ ವಾಹನಗಳು ಅಂತಾರಾಜ್ಯ ಫರ್ಮಿಟ್ ಇಲ್ಲದೇ ಓಡಾಡಬಹುದು ಎಂದಿದೆ. ಆದರೂ ಆಂಧ್ರದ ಅಧಿಕಾರಿಗಳು ಈ ನಿಯಮ ಧಿಕ್ಕರಿಸಿ ಕರ್ನಾಟಕದ ಚಾಲಕರಿಗಳಿಗೆ ರಾಕ್ಷಸರಂತೆ ವಕ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ವಿಪರ್ಯಾಸ ಅಂದ್ರೆ ತುಮಕೂರು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಲಸಿಕೆಯನ್ನು ಪಾವಗಡಕ್ಕೆ ಖಾಸಗಿ ವಾಹನದಲ್ಲಿ ಸಾಗಿಸುತ್ತಿದ್ದಾಗ 10,500 ದಂಡ ವಿಧಿಸಲಾಗಿತ್ತು. ಅದೇ ರೀತಿ ಖಾಸಗಿ ಬಸ್​ಗೆ 1 ಲಕ್ಷ 5 ಸಾವಿರ ರೂ. ದಂಡ ಹಾಕುತಿದ್ದಾರೆ. ಟಿ.ಟಿ. ವಾಹನಕ್ಕೆ 18 ಸಾವಿರ ಫೈನ್ ಹಾಕುತ್ತಿದ್ದಾರೆ.

ಪರಿಣಾಮ ತುಮಕೂರು ಜಿಲ್ಲೆಯದ್ದೇ ಇನ್ನೊಂದು ತಾಲೂಕಿಗೆ ಓಡಾಡುವುದು ಕಷ್ಟವಾಗುತ್ತಿದೆ. ಆಂಧ್ರಕ್ಕೆ ಹೊಂದಿಕೊಂಡಿರುವ ಪಾವಗಡ ತಾಲೂಕಿನ ಖಾಸಗಿ ವಾಹನ ಮಾಲೀಕರಿಗೆ ಇದರಿಂದ ಹೆಚ್ಚಿಗೆ ತೊಂದರೆ ಉಂಟಾಗುತ್ತಿದೆ. ಆಂಧ್ರದ ಆರ್​ಟಿಒ ಅಧಿಕಾರಿಗಳು ದುಸ್ವಪ್ನದಂತೆ ಕಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ರಾಜ್ಯದ ಅಧಿಕಾರಿಗಳು ಗಮನ ಹರಿಸಬೇಕಿದೆ.

ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್ ರಾಜ್ ಕುಮಾರ್​​ಗೆ ಮರಣೋತ್ತರ ಗೌರವ ಡಾಕ್ಟರೇಟ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.